March 21, 2026

ಮಂಗಳೂರು: ಐದು ಪ್ರತ್ಯೇಕ ಪ್ರಕರಣ: ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 46.52 ಲಕ್ಷ ರೂ. ಮೌಲ್ಯದ ಚಿನ್ನ ವಶ

0
image_editor_output_image1865262359-1695819634620.jpg


 
ಮಂಗಳೂರು: ಐದು ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 46.52 ಲಕ್ಷ ರೂ. ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆ.23 ಮತ್ತು 24ರಂದು ಬೇರೆ ಬೇರೆ ಐದು ಪ್ರಕರಣದಲ್ಲಿ ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 24 ಕ್ಯಾರೆಟ್‌ನ ಒಟ್ಟು 46,52,270 ರೂ ಮೌಲ್ಯದ 775 ಗ್ರಾಂ ಚಿನ್ನ ವನ್ನು ಪತ್ತೆಹಚ್ಚಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಿನ್ನವನ್ನು ಪೇಸ್ಟ್ ರೂಪದಲ್ಲಿ ಏರ್‌ಪೋಡ್ಸ್ , ಒಳ ಉಡುಪು, ಮತ್ತು ಟ್ರಾಲಿಬ್ಯಾಗ್‌ನ ರಾಡ್‌ಗಳಲ್ಲಿ ಅಂಟಿಸಿ ಸಾಗಿಸುತ್ತಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.”

Leave a Reply

Your email address will not be published. Required fields are marked *

error: Content is protected !!