September 26, 2026

ಈದ್ ಮೀಲಾದ್ ಪ್ರಯುಕ್ತ ‘ಪೂ ನಿಲಾವ್’ ಹಾಡಿನ ಆಲ್ಬಂ ಬಿಡುಗಡೆ

0
image_editor_output_image116653786-1695703354875.jpg

ವಿಟ್ಲ : ಈದ್ ಮೀಲಾದ್ ಪ್ರಯುಕ್ತ ‘ಕಮರ್ ‘ಪ್ರಕಾಶನದಲ್ಲಿ ಹೊರತಂದ ಖ್ಯಾತ ಗಾಯಕರಾದ K.R.ಮುಸ್ತಫಾ ರಾಫಿದ್ ಹಾಡಿರುವ ಸುಮಧುರ ಶೈಲಿಯ ನಬಿ ಮದ್ಹ್ ಹಾಡಿನ ‘ಪೂ ನಿಲಾವ್’ ಆಲ್ಬಂ ಇಂದು ವಿಟ್ಲದಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆ ಗೊಳಿಸಲಾಯಿತು.

ಲೇಖಕ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಕಾರ್ಯಕ್ರಮವನ್ನು ಉದ್ಗಾಟಿಸಿದರು. ಎಸ್.ವೈ.ಎಸ್.ದ.ಕ.ಜಿಲ್ಲಾ ಮುಖಂಡ ಅಬ್ದುಲ್ ಹಕೀಂ ಪರ್ತಿಪ್ಪಾಡಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಮಾಜಿಕ ಮುಂದಾಳುಗಳಾದ ಶಾಕಿರ್ ಅಳಕೆಮಜಲು ,ಉಬೈದ್ ವಿಟ್ಲ,ಅಬ್ದುಲ್ ಅಝೀಝ್, ಮದ್ರಸ ಮ್ಯಾನೇಜ್ ಮೆಂಟ್ ನ ಆರೀಫ್ ಕರೈ , ಎಸ್ಕೆಎಸ್ಸೆಸ್ಸೆಫ್ ನ ಇಸ್ಮಾಯಿಲ್ ಹನೀಫಿ ವಿಟ್ಲ, ಅಬ್ದುಲ್ ಹಮೀದ್ ಕುರುಂಬಳ ಮೊದಲಾದವರು ಉಪಸ್ಥಿತರಿದ್ದರು.

 

ಸಮಾರಂಭದಲ್ಲಿ ಗಾಯಕ ಮುಸ್ತಫಾ ರಾಫಿದ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಮರ್ ಪ್ರಕಾಶನದ ಮುಖ್ಯಸ್ಥ ರಫೀಕ್ ಮುಸ್ಲಿಯಾರ್ ಕಡಂಬು ಸ್ವಾಗತಿಸಿದರು. ಬಶೀರ್ ಕೊನೆಗೆ ವಂದಿಸಿದರು

Leave a Reply

Your email address will not be published. Required fields are marked *

You may have missed

error: Content is protected !!