September 26, 2026

ಉಳ್ಳಾಲ: ಅಕ್ರಮ ಮರಳು ಸಾಗಾಟ: ಪಿಕಪ್ ವಾಹನ ಸಹಿತ ಓರ್ವ ವಶಕ್ಕೆ

0
IMG-20230925-WA0094.jpg

ಉಳ್ಳಾಲ: ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದ ಉಳ್ಳಾಲ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, ಮರಳು ಲೋಡ್ ಸಹಿತ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ‌.

ಹರೇಕಳ ದೆಬ್ಬೇಲಿ ನಿವಾಸಿ ನಾಝಿಮ್ (20) ಬಂಧಿತ ಆರೋಪಿ.

 

ಆರೋಪಿ ಕಲ್ಲಾಪು ಕುದ್ರು ನೇತ್ರಾವತಿ ನದಿ ತಟದಿಂದ ಮರಳು ತೆಗೆದು ಸಾಗಾಟ ನಡೆಸುತ್ತಿರುವ ಮಾಹಿತಿ ಪಡೆದ ಉಳ್ಳಾಲ ಪೊಲೀಸರು, ಕಲ್ಲಾಪು ಬಳಿ ತಡೆಹಿಡಿದು ಬಂಧಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!