ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಕೊಲೆ
ದೋಟಿಹಾಳ: ದುಷ್ಕರ್ಮಿಗಳು ಓರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದು ಘಟನೆ ಸೆ.24ರ ಭಾನುವಾರ ತಡರಾತ್ರಿಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಲಿಹಾಳ ಗ್ರಾಮದ ಮುದೇನೂರ ರಸ್ಎಯ ಪಕ್ಕದಲ್ಲಿ ನಡೆದಿದೆ.
ತಾಲೂಕಿನ ಜಾಲಿಹಾಳ ಗ್ರಾಮದ ನಿವಾಸಿ ಭಾಗಪ್ಪ ತಂದಿ ಹನಮಪ್ಪ ಕ್ಯಾದಗುಂಪಿ (34) ಕೊಲೆಯಾದ ವ್ಯಕ್ತಿ. ಈತ ಗೌಂಡಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಜಾಲಿಹಾಳ ಗ್ರಾಮದ ಹೊರವಲಯದ ಮುದೇನೂರ ರಸ್ತೆ ಪಕ್ಕದಲ್ಲಿ ಈ ಘಟನೆ ನಡೆದಿದ್ದು, ಕೊಲೆಗೈದ ವ್ಯಕ್ತಿ ಪರಾರಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣಗಳು ಇನ್ನೂ ತಿಳಿದು ಬಂದಿಲ್ಲ.




