March 22, 2026

ವ್ಯಾಪಾರಕ್ಕೆ ತೆರಳಿದ್ದ ಯುವಕನ ಬರ್ಬರ ಹತ್ಯೆ

0
image_editor_output_image-149230119-1695274363401.jpg

ವಿಜಯಪುರ: ಕೂದಲು ವ್ಯಾಪಾರಕ್ಕೆ ತೆರಳಿದ್ದ ಯುವಕನನ್ನು ಬರ್ಬರ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿಯಲ್ಲಿ ನಡೆದಿದೆ.

ಕಾಮಪ್ಪಾ (16) ಹತ್ಯೆಯಾದ ಬಾಲಕ. ಕಳೆದ ಮೂರು ದಿನದ ಹಿಂದೆ ಹಾರೋಗೇರಿಗೆ ಕೂದಲು ಮಾರಾಟ ಮಾಡಲು ವಿಜಯಪುರದಿಂದ ಕಾಮಪ್ಪಾ ಮತ್ತು ರೋಹಿತ್ ಎಂಬ ಬಾಲಕರು ತೆರಳಿದ್ದರು.

ಈ ವೇಳೆ ವ್ಯಾಪಾರಕ್ಕೆ ಹಾರೋಗೇರಿಗೆ ಬಂದಿದ್ಯಾಕೆ ಎಂದು ತಗಾದೆ ತಗೆದು ಬಡಿಗೆ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ಕಾಮಪ್ಪಾನನ್ನು ಹತ್ಯೆ ಮಾಡಿದ್ದಾರೆ. ನಂತರ ಕಾಮಪ್ಪಾ ಮೃತದೇಹವನ್ನು ಬಾವಿಯಲ್ಲಿ ಎಸೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!