7ನೇ ತರಗತಿ ವಿದ್ಯಾರ್ಥಿನಿ ಜ್ವರದಿಂದ ಮೃತ್ಯು
ಹೊಸಪೇಟೆ: ನಗರದ ವಿಜ್ಞಾನ ಇ ಟೆಕ್ನೊ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿನಿ ಜಾಹ್ನವಿ ಎನ್. (12) ತೀವ್ರ ಅಸೌಖ್ಯದಿಂದ ಮಂಗಳವಾರ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆಕೆಗೆ ಡೆಂಗಿ ಬಾಧಿಸಿರುವ ಶಂಕೆ ವ್ಯಕ್ತವಾಗಿದೆ.
‘ಬಾಲಕಿ ಡೆಂಗಿಯಿಂದಲೇ ಮೃತಪಟ್ಟಿದ್ದಾಳೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆಕೆಯ ಮನೆಯ ಸುತ್ತಮುತ್ತಲಿನ ಪರಿಸರವನ್ನು ಅಧ್ಯಯನ ಮಾಡಿ, ಡೆಂಗಿಗೆ ಕಾರಣವಾಗುವ ಸೊಳ್ಳೆಗಳು ಇವೆಯೇ ಎಂಬುದನ್ನು ದೃಢಪಡಿಸಲು ತಂಡವನ್ನು ಕಳುಹಿಸಲಾಗಿದೆ.





