ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಚಿಕ್ಕಮಗಳೂರಿಗೆ ಆಗಮಿಸಿ ಮಹಜರು ನಡೆಸಿದ ಸಿಸಿಬಿ ಪೊಲೀಸರ ತಂಡ
ಚಿಕ್ಕಮಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂಎಲ್‌ಎ ಟಿಕೆಟ್ ನೀಡುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ತನಿಖೆಯನ್ನು ಕೈಗೆತ್ತಿಕೊಂಡ ಸಿಸಿಬಿ ಅಧಿಕಾರಿಗಳ ತಂಡ ಮಂಗಳವಾರ ಚಿಕ್ಕಮಗಳೂರಿಗೆ ಬಂದು ಸ್ಥಳ ಮಹಜರು ನಡೆಸಿದ್ದಾರೆ.
ವಂಚನೆ ಪ್ರಕರಣದ ಪ್ರಮುಖ ಸಭೆಗಳು ನಡೆದಿದೆ ಎನ್ನಲಾದ ಚಿಕ್ಕಮಗಳೂರಿನ ಐಬಿಗೆ ಸ್ಥಳ ಪರಿಶೀಲನೆ ಗೆ ಗಗನ್ ಕಡೂರು ನನ್ನು ಕರೆದುಕೊಂಡು ಬಂದು ಪರಿಶೀಲನೆ ನಡೆಸಿದ್ದಾರೆ.
ಇನ್ನು ಚಿಕ್ಕಮಗಳೂರಿನ ಇದೇ ಪ್ರವಾಸಿ ಮಂದಿರದಲ್ಲಿ ಎರಡನೇ ಮಿಟಿಂಗ್ ನಡೆಸಿ ಬಳಿಕ ವಿಶ್ವನಾಥ್ ಜಿ ಭೇಟಿ ಮಾಡಿಸಿದ್ದ ಚೈತ್ರಾ ಗ್ಯಾಂಗ್ ಈ ನಿಟ್ಟಿನಲ್ಲಿ ಸಿಸಿಬಿ ತಂಡ ಸ್ಥಳ ಮಹಜರು ನಡೆಸಿದೆ.”





