September 26, 2026

ಕಾಸರಗೋಡು: ನೇಣು ಬಿಗಿದು ವಿವಾಹಿತ ಮಹಿಳೆ ಆತ್ಮಹತ್ಯೆ

0
IMG-20230914-WA0004.jpg


 
ಕಾಸರಗೋಡು: ಮಹಿಳೆಯೋರ್ವರು ನೇಣು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೈವಳಿಕೆ ಸಮೀಪದ ಲಾಲ್‌ಬಾಗ್‌ನಲ್ಲಿ ನಡೆದಿದೆ.

ಲಾಲ್‌ಬಾಗ್‌ ಕಂಡತ್ತಾರ್‌ನ ಮಮತಾ (34) ಮೃತಪಟ್ಟವರು.

ಪತಿ ಅಶೋಕ್ ಮೂರು ತಿಂಗಳ ಹಿಂದೆ ಅಸೌಖ್ಯದಿಂದ ನಿಧನ ರಾಗಿದ್ದರು. ಮಂಗಳವಾರ ತನ್ನ ಇಬ್ಬರು ಮಕ್ಕಳನ್ನು ಶಾಲೆಗೆ ಬಿಟ್ಟು ಬಂದಿದ್ದು, ಸಂಜೆ ಮಕ್ಕಳು ಮನೆಗೆ ಬಂದಾಗ ಮನೆಯ ಬಾಗಿಲಿಗೆ ಒಳಗಡೆಯಿಂದ ಚಿಲಕ ಹಾಕಲಾಗಿತ್ತು. ಇದರಿಂದ ನೆರೆಮನೆಯವರಿಗೆ ತಿಳಿಸಿ ಮೊಬೈಲ್ ಗೆ ಕರೆ ಮಾಡಿದರೂ ಸ್ವೀಕರಿಸದೆ ಇದ್ದುದರಿಂದ ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಂಜೇಶ್ವರ ಪೊಲೀಸರು ಮಹಜರು ನಡೆಸಿದರು.

 

Leave a Reply

Your email address will not be published. Required fields are marked *

You may have missed

error: Content is protected !!