ಪಡುಬಿದ್ರಿ: ಬೈಕ್, ಬಸ್ ನಡುವೆ ಅಪಘಾತ: ಬೈಕ್ ಸವಾರ ಸಾವು
ಪಡುಬಿದ್ರಿ: ಬೈಕ್ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ನಂದಿಕೂರು ಮುದರಂಗಡಿ ಜಂಕ್ಷನ್ ನಲ್ಲಿ ಇಂದು ಮುಂಜಾನೆ ನಡೆದಿದೆ. ಮೃತ ಬೈಕ್ ಸವಾರನನ್ನು ಕಾರ್ಕಳ ಅಜೆಕಾರು ನಿವಾಸಿ ಅಶ್ವಿತ್ ಶೆಟ್ಟಿ(24) ಎಂದು ಗುರುತಿಸಲಾಗಿದೆ.
ಅಶ್ವಿತ್ ಶೆಟ್ಟಿ ಅವರು ಯೂಟ್ಯೂಬರ್ ಆಗಿದ್ದು, ಇತ್ತೀಚೆಗೆ ಬೈಕ್ ನಲ್ಲಿ ಲಡಾಖ್ ಹೋಗಿ ಬಂದಿದ್ದರು. ಅಪಘಾತದ ರಭಸಕ್ಕೆ ಅಶ್ವಿತ್ ಅವರ ದೇಹವು ಬಸ್ ಮೈನ್ ಆಕ್ಸಿಲ್ ನಲ್ಲಿ ಸಿಲುಕಿಕೊಂಡಿದ್ದು, ಬಸ್ ನ ಹಿಂದಕ್ಕೆ ಚಲಾಯಿಸಿ ಅಶ್ವಿತ್ ದೇಹವನ್ನು ಹೊರತೆಗೆಲಾಗಿತ್ತು. ಅವಿವಾಹಿತರಾಗಿದ್ದ ಮೃತ ಅಶ್ವಿತ್ ತನ್ನ ತಾಯಿ, ಅಣ್ಣ ಹಾಗೂ ಅಕ್ಕನನ್ನು ಅಗಲಿದ್ದಾರೆ.




