ಒಂದೇ ಕುಟುಂಬದ ನಾಲ್ವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ತಿರುವನಂತಪುರಂ: ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಎರ್ನಾಕುಲಂನ ಕದಮಕ್ಕುಡಿ ಎಂಬಲ್ಲಿ ನಡೆದಿದೆ.
ಮೃತರನ್ನು ನಿಜೋ (39), ಪತ್ನಿ ಶಿಲ್ಪಾ (29), ಮಕ್ಕಳನ್ನು ಅಬ್ಲೆ (7) ಹಾಗೂ ಅರೋನ್ (5) ಎಂದು ಗುರುತಿಸಲಾಗಿದೆ. ಹಣದ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನಿಜೋ ಹಾಗೂ ಶಿಲ್ಪಾ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದರೆ, ಇಬ್ಬರು ಮಕ್ಕಳು ಬೆಡ್ ಮೇಲೆ ಶವವಾಗಿ ಬಿದ್ದಿದ್ದರು.





