March 21, 2026

ಒಮಿಕ್ರಾನ್ ಭೀತಿ:
ಎಲ್ಲರಿಗೂ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಪಡೆಯುವಂತೆ ಶಿಫಾರಸು

0

ವಾಷಿಂಗ್ಟನ್: ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಪಡೆಯುವಂತೆ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು ಶಿಫಾರಸು ಮಾಡಿದೆ.

ಫೈಜರ್ ಮತ್ತು ಮಾಡರ್ನಾ ಲಸಿಕೆ ಪಡೆದು 6 ತಿಂಗಳ ನಂತರ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪಡೆದು ಎರಡು ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯುವಂತೆ ಸೂಚಿಸಿದೆ.

ಎಲ್ಲ ವಯಸ್ಕರೂ ಕೋವಿಡ್ ಬೂಸ್ಟರ್ ಡೋಸ್ ಪಡೆಯಲು ಅರ್ಹರು ಎಂದು ಕಳೆದ ವಾರ ಅಮೆರಿಕದ ಪ್ರಾಧಿಕಾರವು ಘೋಷಿಸಿದ ಬಳಿಕ ಆರೋಗ್ಯ ನಿಯಂತ್ರಣ ಕೆಂದ್ರವು ಈ ಆದೇಶ ಮಾಡಿದೆ.

‘ಓಮೈಕ್ರಾನ್(B.1.1.529) ಆತಂಕವು ಕೋವಿಡ್ ಲಸಿಕೆ, ಬೂಸ್ಟರ್‌ ಡೋಸ್ ಮತ್ತು ಕೋವಿಡ್ -19 ನಿಂದ ರಕ್ಷಣೆ ಪಡೆಯಲು ಅಗತ್ಯವಿರುವ ಎಲ್ಲ ತಡೆಗಟ್ಟುವ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಮತ್ತಷ್ಟು ಒತ್ತಿ ಹೇಳುತ್ತದೆ’ಎಂದು ಸಿಡಿಸಿ ನಿರ್ದೇಶಕ ರೋಚೆಲ್ ವಾಲೆನ್ಸ್ಕಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!