March 22, 2026

ಮಂಗಳೂರು: ದನದ ಮಾಂಸ ಅಕ್ರಮ ಸಾಗಾಟ: ಮೂವರು ಪೊಲೀಸರ ವಶಕ್ಕೆ

0
ms-110923-mamsa.jpg

ಮಂಗಳೂರು: ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಬಜರಂಗದಳದ ಕಾರ್ಯಕರ್ತರು ಭಾನುವಾರ ಮುಂಜಾನೆ ತಡೆದು ನಿಲ್ಲಿಸಿ, ವಾಹನದಲ್ಲಿದ್ದವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಗಳನ್ನು ಕಳವಾರು ಗ್ರಾಮದ ದಾವೂದ್‌, ಜೋಕಟ್ಟೆಯ ಬದ್ರುದ್ದೀನ್‌ ಮತ್ತು ಯಾಸೀನ್‌ ಎಂದು ಗುರುತಿಸಲಾಗಿದೆ.

ವಾಹನದಲ್ಲಿ 2.5 ಕ್ವಿಂಟಾಲ್‌ಗಿಂತಲೂ ಹೆಚ್ಚಿನ ಪ್ರಮಾಣದ ದನದ ಮಾಂಸವನ್ನು ಜೋಕಟ್ಟೆಯಿಂದ ನಗರದ ಬೀಫ್‌ ಸ್ಟಾಲ್‌ಗ‌ಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು.

ಗೋ ಹತ್ಯಾ ನಿಷೇಧ ಕಾಯ್ದೆಯಡಿ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.”

Leave a Reply

Your email address will not be published. Required fields are marked *

error: Content is protected !!