ಆಗಸ್ಟ್ ತಿಂಗಳ ವಿದ್ಯುತ್ ಬಿಲ್ 10,26,054 ಲಕ್ಷ ರೂ.: ಅಂಗಡಿ ಮಾಲಕ ಶಾಕ್
ಚಿಕ್ಕಮಗಳೂರು: ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಒಂದು ತಿಂಗಳ ಕರೆಂಟ್ ಬಿಲ್ 10 ಲಕ್ಷ ರೂ. ಬಂದಿದ್ದು ಅಂಗಡಿ ಮಾಲೀಕ ಶಾಕ್ ಆಗಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ.
ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್ನಲ್ಲಿನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ 10,26,054 ರೂ. ಬಂದಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000 ದಿಂದ 4,500 ರೂ. ಮಾತ್ರ ಬರುತ್ತಿತ್ತು. ಆದರೆ ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ರೂ. ಬಂದಿದೆ. ಬಿಲ್ ಅವಧಿ 1/8/2023 ರಿಂದ 1/9/2023 ರವರೆಗೆ ಎಂದು ನಮೂದಿಸಲಾಗಿದೆ.


