ವಿಟ್ಲ: ವಿಟ್ಲ ಸರಕಾರಿ ಶಾಲೆಯ ಆವರಣದಲ್ಲಿ ಯುವಕರ ತಂಡ ಸ್ವಚ್ಛತಾ ಕಾರ್ಯ
ವಿಟ್ಲ: ವಿಟ್ಲ ಸರಕಾರಿ ಶಾಲೆಯ ಆವರಣದಲ್ಲಿ ಶಾಲಾ ಕ್ರೀಡಾಂಗಣವನ್ನು ಕ್ರೀಡಾಂಗಣದ ಯುವಕರ ತಂಡ ಸ್ವಚ್ಛಗೊಳಿಸಿದರು.




ಶಾಲಾ ಸುತ್ತಮುತ್ತಲಿನಲ್ಲಿ ಗಿಡಗಂಟಿಗಳು ತುಂಬಿದ್ದು, ಶಿಕ್ಷಕರ ದಿನಾಚರಣೆ ಪ್ರಯುಕ್ತ ಯುವಕರ ತಂಡ ಸ್ವಚ್ಛಗೊಳಿಸಿದ್ದಾರೆ. ಈ ಸಂದರ್ಭ ಶಾಲಾ ಕ್ರೀಡಾಂಗಣದ ತಂದ ಅಧ್ಯಕ್ಷ ಹಂಝ ವಿಕೆಎಂ, ಉಪಾಧ್ಯಕ್ಷ ಪ್ರವೀಣ್ ಮಂಗಳಪದವು, ಮತ್ತು ಸದಸ್ಯರು ಇದರ ನೇತೃತ್ವ ವಹಿಸಿದ್ದರು. ಈ ಯುವಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವು ದಿನಗಳ ಹಿಂದೆ ಇದೇ ಶಾಲೆಯ ಕಿಟಕಿಗಳನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.




