March 16, 2026

ಕ್ಲಬ್‌ಗಳ ಮೇಲೆ ಪೊಲೀಸರ ದಾಳಿ: ಜೂಜಾಟದಲ್ಲಿ ತೊಡಗಿದ್ದ 37 ಮಂದಿಯ ಬಂಧನ

0
image_editor_output_image72636620-1693462024084.jpg

ಹಾಸನ: ಜಿಲ್ಲೆಯಲ್ಲಿಂದು ವಿವಿಧ ಕ್ಲಬ್‌ಗಳ ಮೇಲೆ ನಡೆದ ದಾಳಿಯಲ್ಲಿ 37 ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ರಿಕ್ರಿಯೇಷನ್‌ ಕ್ಲಬ್ ಹೆಸರಿನಲ್ಲಿ ಜೂಜಾಟ ನಡೆಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಎರಡು ಕ್ಲಬ್‌ಗಳ ಮೇಲೆ ದಾಳಿ ನಡೆಸಿ, 75 ಸಾವಿರ ರೂ ನಗದು ಜಪ್ತಿ ಮಾಡಿಕೊಂಡು, 37 ಜನರನ್ನ ಬಂಧಿಸಲಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆಯಲ್ಲಿ ಚೌಡೇಶ್ವರಿ ಕ್ರಿಯೇಶನ್ ಕ್ಲಬ್‌ನಲ್ಲಿ ಜೂಜಾಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 28 ಜನರನ್ನು ಬಂಧಿಸಿ, ಜೂಜಿಗಿಟ್ಟಿದ್ದ 44,150 ರೂ. ನಗದು, 20 ಮೊಬೈಲ್, ಎರಡು ಬೈಕ್, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!