ಉಳ್ಳಾಲ: ಸ್ನೇಹಿತರ ಜತೆ ಕೊಳಕ್ಕೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

ಉಳ್ಳಾಲ: ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ ಕೊಳಕ್ಕೆ ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕರ್ನಾಟಕ- ಕೇರಳ ಗಡಿ ಭಾಗದ ಕೆಳಗಿನ ತಲಪಾಡಿ ಬಳಿ ಸಂಭವಿಸಿದೆ.
ಕೇರಳದ ಹೊಸಂಗಡಿ ದುರ್ಗಿಪಳ್ಳ ನಿವಾಸಿ ಹರಿಪ್ರಸಾದ್ ಆಚಾರ್ಯ (36) ಮೃತ ಪಟ್ಟವರು.
ತಲಪಾಡಿಯಲ್ಲಿರುವ ಖಾಸಗಿ ಜಾಗದಲ್ಲಿರುವ ಕೊಳಕ್ಕೆ ಸ್ನಾನಕ್ಕೆಂದು ಬಂದಿದ್ದ ನಾಲ್ವರ ಪೈಕಿ ಹರಿಪ್ರಸಾದ್ ನೀರಿನಡಿಯ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾರೆ.