February 3, 2026

ಮಂಗಳೂರು: ಅಕ್ರಮ ಸರಾಯಿ ಮಾರಾಟ ದಂಧೆ: ಇಬ್ಬರು ಪೊಲೀಸರ ವಶಕ್ಕೆ

0
IMG-20230828-WA0005.jpg



ಮಂಗಳೂರು: ಮಂಗಳೂರಿನ ಬಿಜೈ ಬಳಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತರನ್ನು ಚಿದಾನಂದ(35), ಸ್ವಾಮಿ ಗೌಡ (56) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 5750 ರೂ ಮೌಲ್ಯದ 90 ಎಮ್ ಎಲ್ ನ 128 ಮಧ್ಯದ ಪ್ಯಾಕೇಟ್ ಮತ್ತು ರೂ 2500 ನಗದನ್ನು ಸ್ವಾಧೀನಪಡಿಸಿಕೊಂಡಿದ್ದು, ಉರ್ವಾ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇನ್ನು ಈ ಪ್ರಕರಣದಲ್ಲಿ ಬಾರ್ ಮಾಲಕರು ಕೂಡಾ ಆರೋಪಿಯಾಗಿರುತ್ತಾರೆ.

ಪೊಲೀಸ್ ಆಯುಕ್ತರಾದ ಕುಲದೀಪ್ ಜೈನ್ ರವರ ಆದೇಶದಂತೆ ಉಪಾಯುಕ್ತರು ಕಾಸು ಹಾಗೂ ಅಪರಾದ & ಸಂಚಾರವರ ಸೂಚನೆಯಂತೆ ಮಂಗಳೂರು ಕೇಂದ್ರ ಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ರವರ ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷರಾದ ಶ್ರೀಮತಿ ಭಾರತಿ ಅವರ ತಂಡ ಹರೀಶ್ ಹೆಚ್.ವಿ, ಪಿಎಸ್‌ಐ, ಉಲ್ಲಾಸ್ ಮೊಹಾಲಿ ಎಎಸ್‌ಐ, ಸತೀಶ್ ಹೆಚ್.ಕೆ, ರಾಮಚಂದ್ರ, ಹನುಮಂತ ಕಂಠಿ ರವರನ್ನು ಒಳಗೊಂಡ ತಂಡ ಈ ಕಾರ್ಯಚರಣೆಯನ್ನು ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!