ವಾಶಿಂಗ್ ಮಷಿನ್ ಗೆ ಬಟ್ಟೆ ಹಾಕುವಾಗ ಶಾಟ್೯ಸರ್ಕೂಟ್: ಯುವಕ ಮೃತ್ಯು

ಮಸ್ಕಿ: ವಾಶಿಂಗ್ ಮಷಿನ್ ಗೆ ಬಟ್ಟೆ ಹಾಕುವಾಗ ಶಾಟ್೯ಸರ್ಕೂಟ್ ಆಗಿ ಯುವಕನೊರ್ವ ಮೃತಪಟ್ಟ ಘಟನೆ ತಾಲೂಕಿನ ದುರ್ಗಕ್ಯಾಂಪ್ ನಲ್ಲಿ ನಡೆದಿದೆ.
ನಾಗೇಂದ್ರ ತಂದೆ ಸುಬ್ಬರಾವ್(32) ಸಾವನಪ್ಪಿದ ಯುವಕ. ಮಸ್ಕಿ ಪಟ್ಟಣದಲ್ಲಿ ಪತ್ರೋಳಿ ಮಾರಾಟ ಅಂಗಡಿ ಹೊಂದಿರುವ ನಾಗೇಂದ್ರ.
ತಾಲೂಕಿನಾದ್ಯಂತ ಪತ್ರೋಳಿ ನಾಗೇಂದ್ರ ಎಂದು ಫೇಮಸ್. ಸೋಮವಾರ ಬೆಳಗ್ಗೆ ಮನೆಯಲ್ಲಿ ವಾಶಿಂಗ್ ಮಷಿನ್ ಗೆ ಬಟ್ಟೆ ಹಾಕಲು ಹೋಗಿದ್ದು, ಡೈರೆಕ್ಟ್ ಆಗಿ ಫ್ಲಗ್ ಹಾಕಿದಾಗ ವಿದ್ಯುತ್ ತಗುಲಿ ಸಾವನಪ್ಪಿದ್ದಾನೆ.