15 ತಿಂಗಳ ನಂತರ ಬೆಂಗಳೂರಿನ ಶವಾಗಾರದಲ್ಲಿ ಇಬ್ಬರು ಕೋವಿಡ್-19 ಸಂತ್ರಸ್ತರ ಶವ ಪತ್ತೆ

ಬೆಂಗಳೂರು: ರಾಜಾಜಿ ನಗರದಲ್ಲಿರುವ ಇಎಸ್‌ಐ ಆಸ್ಪತ್ರೆಯ ಶವಾಗಾರದಲ್ಲಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದ ಇಬ್ಬರು ಕೋವಿಡ್-19 ಪಾಸಿಟಿವ್ ರೋಗಿಗಳ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಮೃತರಲ್ಲಿ ಒಬ್ಬಳನ್ನು ದುರ್ಗಾ ಸುಮಿತ್ರಾ ಎಂದು ಗುರುತಿಸಲಾಗಿದ್ದು, ಆಕೆಯ ಕೊಳೆತ ದೇಹವು ಹಳೆಯ ಫ್ರೀಜರ್‌ನಲ್ಲಿ ಪತ್ತೆಯಾಗಿದೆ ಎಂದು ಆಸ್ಪತ್ರೆಯಿಂದ ಕರೆ ಬಂದಿದ್ದರಿಂದ ಅವರು ಸಂಬಂಧಿಕರು ತುಂಬಾ ಗಲಿಬಿಲಿಗೊಂಡಿದ್ದಾರೆ ಎಂದು ಹೇಳಿದರು. ಕಳೆದ ವರ್ಷವೇ ಮಹಿಳೆಯ ಅಂತಿಮ ಸಂಸ್ಕಾರ ನೆರವೇರಿಸಿದ್ದರಿಂದ ಸಂಬಂಧಿಕರು ಕಂಗಾಲಾಗಿದ್ದರು.
ಆಸ್ಪತ್ರೆಯ ಅಧಿಕಾರಿಗಳು ಪಡೆದ ಮಾಹಿತಿಯ ಪ್ರಕಾರ, ದುರ್ಗಾ ಸುಮಿತ್ರಾ ಅವರ ದೇಹವನ್ನು ಅಂತ್ಯಸಂಸ್ಕಾರ ಮಾಡಲಾಯಿತು ಮತ್ತು ಅವರು ಸಾವಿನ ನಂತರ ಮರಣ ಪ್ರಮಾಣಪತ್ರವನ್ನು ಅವರ ಸಂಬಂಧಿಕರಿಗೆ ನೀಡಿದರು.
ದುರ್ಗಾ ಸುಮಿತ್ರಾ ಅವರಿಗೆ ಕೋವಿಡ್-19 ಇದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ನಾಲ್ಕು ದಿನಗಳ ನಂತರ ಅವರು ಸಾವನ್ನಪ್ಪಿದರು. ನಮ್ಮ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ನಮಗೆ ತಿಳಿಸಲಾಯಿತು, ಆದರೆ ನಿನ್ನೆ ಮತ್ತೆ ನಮಗೆ ಕರೆ ಬಂದಿದೆ, ಆಕೆಯ ಕೊಳೆತ ದೇಹವನ್ನು ಹಳೆಯ ಫ್ರೀಜರ್‌ನಲ್ಲಿ ಇರಿಸಲಾಗಿದೆ. ಇದರಿಂದ ತುಂಬಾ ಕಂಗಾಲಾಗಿದ್ದೇವೆ ಎಂದು ಸುಮಿತ್ರಾ ಅವರ ಸಂಬಂಧಿ ಸುಜಾತಾ ಹೇಳಿದರು.
ಇನ್ನೊಂದು ಕೊಳೆತ ಶವ ಬೆಂಗಳೂರಿನ ನಿವಾಸಿ ಮುನಿರಾಜು ಅವರದ್ದು ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಶನಿವಾರ ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಶವಾಗಾರದ ಆವರಣ ಸ್ವಚ್ಛ ಮಾಡಲೆಂದು ಹೋದಾಗ ಸ್ಥಲದಲ್ಲಿ ದುರ್ವಾಸನೆ ಬರುವುದನ್ನು ಗಮನಿಸಿ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವೈದ್ಯಕೀಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಫ್ರೀಜರ್ ನಲ್ಲಿ ಎರಡು ಮೃತದೇಹಗಳಿರುವುದು ಕಂಡು ಬಂದಿದೆ. ನಂತರ ವೈದ್ಯಕೀಯ ಅಧೀಕ್ಷಕರು ಹಾಗೂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಎರಡೂ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.