ಮಂಗಳೂರು: ಆಟಿಕೆ ಪಿಸ್ತೂಲ್ ತೋರಿಸಿ ಕಾರು, ಮೊಬೈಲ್ ದೋಚಿದ್ದ ಪ್ರಕರಣ: ಆರೋಪಿಯ ಬಂಧನ, ಮತ್ತೋರ್ವ ಪರಾರಿ
ಮಂಗಳೂರು: ಕಿಡ್ನಾಪ್ ಮಾಡಿ ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಕಾರು, ಮೊಬೈಲ್ ದೋಚಿದ್ದ ಪ್ರಕರಣದ ಆರೋಪಿಯನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿ, ಇನ್ನೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ನೌಫಾಲ್ ಯಾನೆ ಟೊಪ್ಪಿ ನೌಫಾಲ್ (31) ಎಂಬಾತ ಬಂಧಿತ ಆರೋಪಿ. ಪುಚ್ಚ ಎಂಬಾತ ತಲೆಮರೆಸಿದ್ದಾನೆ.
ಮಜೀದ್ ಸೈಯದ್ ಎಂಬವರನ್ನು ನೌಫಾಲ್ ಮತ್ತು ಪುಚ್ಚ ಸೇರಿ ಕಿಡ್ನಾಪ್ ಮಾಡಿ 5 ಲಕ್ಷ ರೂಪಾಯಿ ಹಾಗೂ ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು.
ಅವರು ಕೊಡಲು ನಿರಾಕರಿಸಿದಾಗ ಅವರ ಬಳಿಯಿಂದ ಕಾರು, ಮೊಬೈಲ್ ಹಾಗೂ 18 ಸಾವಿರ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿದ್ದರು ಎಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.




