February 3, 2026

ಪುತ್ತೂರಿನ ಯುವತಿಯ ಕೊಲೆ ಪ್ರಕರಣ: ಕೊಲೆಗೆ ಕಾರಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಎಸ್ಪಿ ರಿಷ್ಯಂತ್‌

0
image_editor_output_image-108164711-1692954308595.jpg

ಮಂಗಳೂರು: ಪುತ್ತೂರಿನಲ್ಲಿ ನಿನ್ನೆ ಕೊಲೆಯಾದ ಯುವತಿ ಗೌರಿ ಮತ್ತು ಕೊಲೆಗಾರ ಪದ್ಮರಾಜ್‌ ಅವರು ಕಳೆದ 6 ವರ್ಷಗಳಿಂದ ಪರಿಚಿತರಾಗಿದ್ದು, ಇದೀಗ ಯುವತಿಯ ಕೊಲೆಯೊಂದಿಗೆ ಅವರೊಳಗಿನ ಪರಿಚಯ ಮತ್ತು ಪ್ರೀತಿ ಸಹಿತ ಎಲ್ಲವೂ ಕೊನೆಗೊಂಡಿದೆ.

ಮೃತ ಯುವತಿ ಗೌರಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಇಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಿ ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವೆನ್ಲಾಕ್‌ ಆಸ್ಪತ್ರೆಯ ಆವರಣದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪ್ರಕರಣದ ಕುರಿತಂತೆ ಜಿಲ್ಲಾ ಎಸ್.ಪಿ. ರಿಷ್ಯಂತ್‌ ಸಿ. ಬಿ. ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ ಗೌರಿ ವಿಟ್ಲದ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿಯೇ ಪದ್ಮರಾಜನ ಪರಿಚಯವಾಗಿತ್ತು. ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು. ಈ 6 ವರ್ಷಗಳ ಅವಧಿಯಲ್ಲಿ ಮಧ್ಯದಲ್ಲೊಮ್ಮೆ ಅವರೊಳಗೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. 2020 ರಲ್ಲಿ ಗೌರಿ ಆತನ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು.

ಈ ಸಂದರ್ಭದಲ್ಲಿ ಪೊಲೀಸರು ಇಬ್ಭರನ್ನೂ ಠಾಣೆಗೆ ಕರೆಸಿ ಇನ್ನುಮುಂದೆ ಪರಸ್ಪರ ಮಾತುಕತೆ ಇಲ್ಲ ಎಂಬುದಾಗಿ ಮುಚ್ಚಳಿಕೆಯನ್ನು ಬರೆಸಿ ಕಳುಹಿಸಿದ್ದರು. ಆದರೆ ಆ ಬಳಿಕವೂ ಇಬ್ಬರ ನಡುವೆ ಮಾತುಕತೆ ಮುಂದುವರಿದಿತ್ತು. ಪದ್ಮರಾಜ್‌ ಆಕೆಗೆ ಮೊಬೈಲ್‌ ಪೋನ್‌ ಕೊಡಿಸಿದ್ದನು. ಆದರೆ ಮತ್ತೆ ಇತ್ತೀಚೆಗೆ ಅವರೊಳಗೆ ಭಿನ್ನಾಭಿಪ್ರಾಯ ಬಂದಿದ್ದು, ಆಕೆ ಆತನ ಪ್ರೀತಿಯನ್ನು ನಿರಾಕರಿಸಿದ್ದಳು.

ಈ ಹಿನ್ನೆಲೆಯಲ್ಲಿ ನಿನ್ನೆ ಆತ ಬೈಕಿನಲ್ಲಿ ಗೌರಿ ಕೆಲಸ ಮಾಡುತ್ತಿದ್ದ ಪುತ್ತೂರಿನ ಫ್ಯಾನ್ಸಿ ಅಂಗಡಿಗೆ ತೆರಳಿ ಈ ಹಿಂದೆ ಗಿಫ್ಟ್‌ ಕೊಟ್ಟಿದ್ದ ಮೊಬೈಲನ್ನು ಆಕೆಯ ಬ್ಯಾಗಿನಿಂದ ಕಿತ್ತುಕೊಂಡು ಹೋಗಿದ್ದನು.

Leave a Reply

Your email address will not be published. Required fields are marked *

You may have missed

error: Content is protected !!