June 26, 2026

ಹೃದಯಾಘಾತದಿಂದ  ಪೊಲೀಸ್ ಕಾನ್ ಸ್ಟೇಬಲ್ ಮೃತ್ಯು

0
image_editor_output_image-574325753-1692856664940.jpg

ಯಾದಗಿರಿ: ರಜೆಯಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಠಾಣೆಯ ಕಾನ್ಸ್‌ಟೇಬಲ್ ದೇವೇಂದ್ರಪ್ಪ (40) ಮೃತ ದುರ್ದೈವಿ. ದೇವೇಂದ್ರಪ್ಪಗೆ ಕಳೆದ ಮೂರು ತಿಂಗಳುಗಳಿಂದ ಜ್ವರ ಬಾಧಿಸುತ್ತಿದ್ದ ಕಾರಣ ಜೂನ್‌ನಿಂದ ರಜೆಯಲ್ಲಿದ್ದರು.

ಹೀಗಾಗಿ ಬುಧವಾರ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗುವ ಸಂದರ್ಭ ಮಾರ್ಗಮಧ್ಯೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ

Leave a Reply

Your email address will not be published. Required fields are marked *

error: Content is protected !!