March 18, 2026

ಉಳ್ಳಾಲ: ಗಾಂಜಾ ನಶೆಯಲ್ಲಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು: ಪೊಲೀಸರ ಕಾರ್ಯಾಚರಣೆ ವೀಡಿಯೋ ವೈರಲ್

0
image_editor_output_image-2015098051-1692545762762

ಉಳ್ಳಾಲ: ಹೆದ್ದಾರಿ ನಡುವೆ ನಿಂತಿದ್ದ ಗಾಂಜಾ ವ್ಯಸನಿಯನ್ನು ಕೊಣಾಜೆ ಠಾಣಾ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.
ಉಳ್ಳಾಲ ಮುಕ್ಕಚ್ಚೇರಿ ಕೈಕೋ ನಿವಾಸಿ ಅಬೂಬಕರ್ ಸಿದ್ದೀಖ್‌( 24) ಬಂಧಿತ ಆರೋಪಿ.

ಗಾಂಜಾ ಸೇವಿಸಿ ಬೈಕಿನಲ್ಲಿ ಬಂದಿದ್ದ ಆರೋಪಿ ಸಾರ್ವಜನಿಕವಾಗಿ ಆತಂಕ ಸೃಷ್ಟಿಸಿದ್ದ. ನಾಟೆಕಲ್ ಜಂಕ್ಷನ್ ನಲ್ಲಿ ಚೂರಿ ಹಿಡಿದುಕೊಂಡು ಜನರಲ್ಲಿ ಭಯ ಮೂಡಿಸುತ್ತಿದ್ದು, ಸ್ಥಳೀಯರು ಕೊಣಾಜೆ ಠಾಣಾ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕಾಗಮಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾದರು. ಈ ಕಾರ್ಯಾಚರಣೆ ವೀಡಿಯೋ ವಾಟ್ಸಾಪ್ ಗಳಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

You may have missed

error: Content is protected !!