December 16, 2025

ಉಡುಪಿ: ಇತ್ತಂಡಗಳ ನಡುವೆ ಕಲ್ಲುತೂರಾಟ:
ಕಾರುಗಳು ಜಖಂ

0
image_editor_output_image781483452-1638164681401.jpg

ಉಡುಪಿ: ಇಲ್ಲಿನ ಹೂಡೆಯಲ್ಲಿ ರವಿವಾರ ರಾತ್ರಿ ನಡೆದ ಕಲ್ಲು ತೂರಾಟದಲ್ಲಿ ಎರಡು ಕಾರುಗಳು ಜಖಂಗೊಂಡಿವೆ.

ಅಪಾಯ ತಂದೊಡ್ಡುವ ರೀತಿಯಲ್ಲಿ ಮರಳು ಸಾಗಾಟದ ಟೆಂಪೋವನ್ನು ಚಾಲನೆ ಮಾಡುತ್ತಿದ್ದು, ಇದು ಇತರ ವಾಹನ ಚಾಲಕರಿಗೆ ಕಿರಿಕಿರಿಯುಂಟುಮಾಡಿದೆ. ಹಂಪನಕಟ್ಟೆ, ಕೆಮ್ಮಣ್ಣು ಬಡಾವಣೆಯ ನಿವಾಸಿಗಳು ಟೆಂಪೋವನ್ನು ತಡೆದಿದ್ದು, ಟೆಂಪೋ ಚಾಲಕ ಮತ್ತು ಸ್ಥಳಿಯರ ನಡುವೆ ವಾಗ್ವಾದ ನಡೆದಿದೆ.

ನಂತರ ವಾಹನ ಸವಾರರು ಹೂಡೆ ಕಡೆಗೆ ತೆರಳಿದಾಗ ಟೆಂಪೋ ಚಾಲಕನ ಹಿಂಬದಿಯಲ್ಲಿದ್ದ ಜನರ ಗುಂಪೊಂದು ವಾಹನ ಸವಾರರನ್ನು ತಡೆದು ಹೊಡೆದಾಟ ನಡೆಸಿದೆ. ಇದೇ ಸಮಯದಲ್ಲಿ ಕಲ್ಲು ತೂರಾಟವೂ ನಡೆದಿದೆ.

ವಿಷಯ ತಿಳಿದ ಮಲ್ಪೆ ಎಸ್‌ಐ ಶಕ್ತಿವೇಲು ತಮ್ಮ ಖಾಸಗಿ ವಾಹನದಲ್ಲಿ ಸ್ಥಳಕ್ಕಾಗಮಿಸಿದ್ದರು. ಠಾಣೆಯ ರಾತ್ರಿ ಕರ್ತವ್ಯದ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದರು. ಎಸ್‌ಐ ಖಾಸಗಿ ವಾಹನಕ್ಕೂ ಕಲ್ಲು ತೂರಾಟ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಮಲ್ಪೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!