March 21, 2026

ಸುರತ್ಕಲ್: ಎಸ್ಬಿಐ ಬ್ಯಾಂಕಿನ ಎಟಿಎಂಗೆ ಮತ್ತೊಮ್ಮೆ ಹಾನಿ

0
image_editor_output_image-988308423-1638164097809.jpg

ಸುರತ್ಕಲ್: ಇಲ್ಲಿನ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿ ಇರುವ ಎಸ್ ಬಿ ಐ ಬ್ಯಾಂಕಿನ ಎಟಿಎಂ ಯನ್ನು ವ್ಯಕ್ತಿ ಯೋರ್ವ ಪುಡಿಗಟ್ಟಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಸೆ.9 ರಂದು ಇದೇ ಎಟಿಎಂ ನ ಗಾಜನ್ನು ಒಡೆದು ಹಾಕಲಾಗಿತ್ತು. ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿ ವಿಚಾರಣೆ ನಡೆಸಲಾಗಿತ್ತು.

ಇದೀಗ ಎರಡನೇ ಬಾರಿ ಬ್ಯಾಂಕಿನ ಎಟಿಎಂ ಯಂತ್ರ ಉರುಳಿಸಿ ಎಸಿ, ಸಿಸಿ ಟಿವಿ ಗಾಜನ್ನು ಪುಡಿ ಮಾಡಲಾಗಿದೆ. ಹೆಲ್ಮೆಟ್ ಒಂದರಲ್ಲಿ ಗಾಜನ್ನು ಒಡೆದು ಒಳಗಿನ ಎಸಿ ಯನ್ನು ಹಾಳುಗೆಡವಲಾಗಿದ್ದು, ಲಕ್ಷಾಂತರ ರೂ. ನಷ್ಟವುಂಟಾಗಿದೆ.

ಕಟ್ಟಡದ ಮಾಲಕ ಸತೀಶ್ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬ್ಯಾಂಕಿನ ಅಧಿಕಾರಿಗಳು ಸೋಮವಾರ ದೂರು ದಾಖಲಿಸುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

You may have missed

error: Content is protected !!