ಬೈಕ್ ಗಳ ನಡುವೆ ನಡೆದ ಅಪಘಾತ: ಕಾಲೇಜು ಉಪನ್ಯಾಸಕ, ಶಾಲಾ ಶಿಕ್ಷಕಿ ಸಾವು
ಬೆಂಗಳೂರು: ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಕಾಲೇಜು ಉಪನ್ಯಾಸಕ ಹಾಗೂ ಶಾಲಾ ಶಿಕ್ಷಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿ ಬಳಿ ನಡೆದಿದೆ.
ಮೃತರನ್ನು ನರಸಪ್ಪ(51) ಮತ್ತು ರಕ್ಷಾ(21) ಎಂದು ಗುರುತಿಸಲಾಗಿದೆ.
ಕೆಂಗೇರಿ ಸಮೀಪದ ಮಾರುತಿ ನಗರ ಮುಖ್ಯ ರಸ್ತೆಯಲ್ಲಿ ರಕ್ಷಾ ಚಂದನ್ ಯುವಕನ ಜೊತೆ ಪಲ್ಸರ್ ಬೈಕ್‌ನಲ್ಲಿ ಕಾಲೇಜು ಕಡೆ ವೇಗವಾಗಿ ಹೋಗುತ್ತಿದ್ದರು.
ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ನರಸಪ್ಪನವರ ಬೈಕ್‍ಗೆ ರಭಸವಾಗಿ ಪಲ್ಸರ್ ಬೈಕ್ ಢಿಕ್ಕಿ ಹೊಡೆದಿದೆ.





