July 10, 2026

ವಿಟ್ಲ: ಅಳಿಕೆ ಗ್ರಾ.ಪಂ ಅಧ್ಯಕ್ಷರಾಗಿ ಪದ್ಮನಾಭ ಪೂಜಾರಿ ಸಣ್ಣಗುತ್ತು, ಉಪಾಧ್ಯಕ್ಷರಾಗಿ ಸರೋಜಿನಿ ಆಯ್ಕೆ

0
IMG-20230810-WA0047.jpg

ವಿಟ್ಲ: ಅಳಿಕೆ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಪದ್ಮನಾಭ ಪೂಜಾರಿ ಸಣ್ಣಗುತ್ತು ಮತ್ತು ಉಪಾಧ್ಯಕ್ಷರಾಗಿ ಸರೋಜಿನಿ ಕೇಕಣಾಜೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಉಷಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಅಳಿಕೆ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಿನ್ನಪ್ಪ ಗೌಡ ಸಹಕರಿಸಿದರು.

ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ್, ಕೆ.ಪಿ.ಸಿ.ಸಿ ಸದಸ್ಯರಾದ ಎಂ.ಎಸ್ ಮಹಮ್ಮದ್, ಡಿಸಿಸಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಪ್ರಮುಖರಾದ ರಮಾನಾಥ ವಿಟ್ಲ, ಮೋಹನ ಗುರ್ಜಿನಡ್ಕ, ವಿ.ಕೆ.ಯಂ. ಅಶ್ರಫ್, ಶ್ರೀನಿವಾಸ ಶೆಟ್ಟಿ ಕೊಲ್ಯ ವಿಟ್ಲ, ರವಿ ಆಲಂಗಾರು, ಸುಶಾಂತ್ ಶೆಟ್ಟಿ, ಲಕ್ಷ್ಮಣ ಪೂಜಾರಿ, ಜನಾರ್ಧನ ಪೂಜಾರಿ, ಪ್ರವೀಣ್ ಪೂಜಾರಿ, ಸುಧಾಕರ ಮಡಿಯಾಲ ಹಾಗೂ ಪಂಚಾಯತ್ ಸದಸ್ಯರಾದ, ಸರಸ್ವತಿ ಕೆ, ಜಗದೀಶ ಶೆಟ್ಟಿ ಮುಳಿಯ, ಸೀತಾರಾಮ ಶೆಟ್ಟಿ ಮುಳಿಯ, ಸದಾಶಿವ ಶೆಟ್ಟಿ ಮಡಿಯಾಲ, ರವೀಶ ಕೆ, ಕಾನ ಈಶ್ವರ ಭಟ್, ಸೆಲ್ವಿನಾ ಡಿಸೋಜ, ಬಬಿತಾ ಜೆಡ್ಡು, ಶಾಂಭವಿ ಸುಧಾಕರ, ಗಿರಿಜ ಎನ್, ಭಾಗೀರಥಿ, ಶಶಿಕಲಾ, ಸುಕುಮಾರ, ಮುಂತಾದವರು ಉಪಸ್ಥಿತರಿದ್ದು ಅಭಿನಂದಿಸಿದರು.
,,,,,,

Leave a Reply

Your email address will not be published. Required fields are marked *

error: Content is protected !!