March 23, 2026

ಕಾಪು: ಶಾಲಾ ವಾಹನ, ಶಾಲಾ ಮಕ್ಕಳಿದ್ದ ರಿಕ್ಷಾ ಮುಖಾಮುಖಿ ಢಿಕ್ಕಿ, ಗಾಯಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

0
image_editor_output_image1063280335-1691656894178.jpg

ಉಡುಪಿ: ಶಾಲಾ ವಾಹನ ಹಾಗೂ ಶಾಲಾ ಮಕ್ಕಳನ್ನು ಕೊಂಡೊಯುತ್ತಿದ್ದ ರಿಕ್ಷಾ ನಡುವೆ ಮುಖಾ ಮುಖಿ ಡಿಕ್ಕಿಯಾದ ಘಟನೆ ಆ.10ರಂದು ಉಡುಪಿಯ ಕಾಪು ಸಮೀಪ ಇನ್ನಂಜೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ 9 ಗಂಟೆಗೆ ಇನ್ನಂಜೆ ಕಲ್ಲುಗುಡ್ಡೆ ಬ್ರಹ್ಮ ಬೈದರ್ಕಳ ಗರಡಿ ಬಳಿಯ ಇಕ್ಕಟ್ಟಾದ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ರಿಕ್ಷಾದಲ್ಲಿದ್ದ 5 ಮಕ್ಕಳು ಗಾಯಗೊಂಡಿದ್ದು, ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಾಳು ಮಕ್ಕಳನ್ನು ಸ್ಥಳೀಯ ಸಮಾಜ ಸೇವಕ ನಾಗರಾಜ್ ರವರು ಅಂಬುಲೆನ್ಸ್‌ನಲ್ಲಿ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶಿರ್ವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!