March 23, 2026

ಉಳ್ಳಾಲ: ಲಕ್ಷಾಂತರ ಮೌಲ್ಯದ ಸೆಂಟ್ರಿಂಗ್‌ ಶೀಟ್‌ಗಳ ಕಳವು: ಪ್ರಕರಣ ದಾಖಲು

0
IMG-20230810-WA0020.jpg

ಉಳ್ಳಾಲ: ಲಕ್ಷಾಂತರ ಮೌಲ್ಯದ ಸೆಂಟ್ರಿಂಗ್‌ ಶೀಟ್‌ ಗಳನ್ನು ಕಳವು ನಡೆಸಿರುವ ಘಟನೆ ಕೊಲ್ಯ ಶ್ರೀ ಶಾರದೋತ್ಸವ ಉತ್ಸವ ಸಮಿತಿಯ ನೂತನ ಮಂದಿರದ ವಠಾರದಿಂದ ಇಂದು ನಸುಕಿನ ಜಾವ ಸಂಭವಿಸಿದೆ.

ಗುತ್ತಿಗೆದಾರ ತೊಕ್ಕೊಟ್ಟು ನಿವಾಸಿ ಸುಂದರ ಗಟ್ಟಿ ಎಂಬವರು ಬಾಡಿಗೆಗೆ ತಂದಿದ್ದ 2.5 ಲಕ್ಷ ರೂ.ಗಳ 119 ತಗಡುಶೀಟುಗಳನ್ನು ಕಳವು ನಡೆಸಲಾಗಿದೆ.

ನಸುಕಿನ 2 ಗಂಟೆಯಿಂದ 3 ಗಂಟೆಯೊಳಗೆ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ. ಸ್ಥಳೀಯ ಸಿಸಿಟಿವಿ ಆಧಾರದಲ್ಲಿ ಪಿಕಪ್‌ ವಾಹನವನ್ನು ಬಳಸಿಕೊಂಡು ಕೃತ್ಯ ಎಸಗಿರುವುದಾಗಿಯೂ ಗೊತ್ತಾಗಿದೆ. ಕೊಲ್ಯ ಶ್ರೀ ಶಾರದ ಉತ್ಸವ ಸಮಿತಿಯವರ ನೂತನ ಮಂದಿರ ನಿರ್ಮಾಣ ಕಾಮಗಾರಿ ಜರಗುತ್ತಿದ್ದು, ಆ.೮ ರಂದು ಸಂಜೆ ಗುತ್ತಿಗೆದಾರ ಸುಂದರ ಗಟ್ಟಿ ಶೀಟುಗಳನ್ನು ಬಾಡಿಗೆಗೆ ಪಡೆದುಕೊಂಡು ತಂದಿರಿಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!