March 23, 2026

ಪುತ್ತೂರು: ಪತ್ನಿಗೆ ಚೂರಿ ಇರಿತ: ಪತಿಯ ವಿರುದ್ಧ ಕೇಸು ದಾಖಲು

0
IMG-20230807-WA0035.jpg

ಪುತ್ತೂರು: ಪುತ್ತೂರು ತಾಲೂಕಿನ ನೆಲ್ಲಿಕಟ್ಟೆ ಸಮೀಪದ ಬ್ರಹ್ಮನಗರದಲ್ಲಿ ತವರು ಮನೆಯಲ್ಲಿದ್ದ ಪತ್ನಿಗೆ ಆಕೆಯ ಪತಿ ಚೂರಿಯಿಂದ ಇರಿತಗೊಳಿಸಿರುವ ಘಟನೆ ನಡೆದಿದೆ.

ಬ್ರಹ್ಮನಗರದ ಮಹಿಳೆಯೊಬ್ಬರು ಹಲ್ಲೆಗೊಳಗಾಗಿದ್ದು, 6 ವರ್ಷದ ಹಿಂದೆ ಮದುವೆಯಾಗಿದ್ದು ಮದುವೆಯಾಗಿ 2-3 ವರ್ಷಗಳಿಂದ ಆಕೆಯ ಪತಿ ಪ್ರಶಾಂತ್ ಮಾನಸಿಕ ಕಿರುಕುಳ ನೀಡುತ್ತಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಲಾಗಿದ್ದರೂ ಪತಿ ತೊಂದರೆ ನೀಡುವುದನ್ನು ಮುಂದುವರಿಸಿದ್ದಾರೆ.

ಇನ್ನು ಆ.6 ರಂದು ರಾತ್ರಿ ಮಹಿಳೆ ತನ್ನ ತಾಯಿ ಮನೆಯಲ್ಲಿ ಇರುವಾಗ ಅಲ್ಲಿಗೆ ಬಂದ ಪತಿ ಪ್ರಶಾಂತ್ ಅವ್ಯಾಚವಾಗಿ ಬೈದು ಚೂರಿಯಿಂದ ಕೈಗೆ ತಿವಿದು ಜೀವ ಬೆದರಿಕೆ ಒಡ್ಡಿರುವುರುವುದಾಗಿ ಆರೋಪಿಸಲಾಗಿದೆ.

ಘಟನೆಯಿಂದ ಗಾಯಾಳು ಮಹಿಳೆ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಕೆಯ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!