November 22, 2024

ಹೊಸ ರೂಪಾಂತರಿ ವೈರಸ್ ಹಿನ್ನೆಲೆ:
ದ.ಕ. ಜಿಲ್ಲೆಯಲ್ಲಿ ತೀವ್ರಗೊಂಡ ಗಡಿ ತಪಾಸಣೆ

0

ಸಂಗ್ರಹ ಚಿತ್ರ: ಮಂಗಳೂರು: ಕೋವಿಡ್ ನ ಹೊಸ ರೂಪಾಂತರಿ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಗಡಿಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು, ಎಲ್ಲಾ ಗಡಿಗಳಲ್ಲೂ ತಪಾಸಣೆ ನಡೆಸಲಾಗುತ್ತಿದ್ದು, ಮೂರು ಪಾಳಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೋಮವಾರದಿಂದ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ತಲಪಾಡಿ ಸೇರಿದಂತೆ ಎಲ್ಲಾ ಗಡಿಗಳಲ್ಲಿ ತಪಾಸಣೆ ಆರಂಭಗೊಂಡಿದೆ. ಸೋಮವಾರದಿಂದ ಇತರ ಇಲಾಖೆಗಳ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಸೋಮವಾರದಿಂದ ಆಗಮಿಸುವವರು ಆರ್ ಟಿಪಿಸಿಆರ್ ವರದಿ ಹೊಂದಿರಬೇಕು. ನಿತ್ಯ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ದ.ಕ. ಜಿಲ್ಲಾಡಳಿತದ ವತಿಯಿಂದ ನಿತ್ಯಪ್ರಯಾಣಿಕರಿಗೆ ಆರ್ ಟಿಪಿಸಿಆರ್ ಪರೀಕ್ಷೆಗೂ ಅವಕಾಶ ಕಲ್ಪಿಸಲಾಗಿದೆ ಎಂದರು.

ಈಗಾಗಲೇ ಜಿಲ್ಲೆಗೆ ಆಗಮಿಸಿದ ಕೇರಳ ವಿದ್ಯಾರ್ಥಿಗಳ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಲ್ಲದೆ, ಎಲ್ಲಾ ಕ್ಯಾಂಪಸ್, ಕಾಲೇಜಿಗಳ ವಿದ್ಯಾರ್ಥಿಗಳ ಸ್ಕ್ರೀನಿಂಗ್ ಗೆ ಸೂಚನೆ ನೀಡಲಾಗಿದೆ. ದ.ಕ. ಜಿಲ್ಲೆಯ ಬಹುತೇಕ ಪ್ರದೇಶಗಳು ಗಡಿ ಪ್ರದೇಶಗಳಾಗಿವೆ. ದ.ಕ, ಕಾಸರಗೋಡು ನಡುವೆ ಅವಿನೋಭಾವ ಸಂಬಂಧವಿದ್ದು, ಜನರಿಗೆ ತೊಂದರೆಯಾಗದಂತೆ, ಸಮಸ್ಯೆಗಳಾಗದಂತೆ ನಿರ್ವಹಣೆ ಮಾಡಬೇಕು. ಕಾಸರಗೋಡಿನ ಹೆಚ್ಚಿನ ಜನರು ಮಂಗಳೂರು ಅವಲಂಬಿಸಿದ್ದಾರೆ. ಜನರಿಗೆ ತೊಂದರೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಲಾಗುವುದು. ನಿತ್ಯ ಪ್ರಯಾಣಿಸುವವರ ವಿಚಾರ ನಮಗೆ ಮುಖ್ಯವಾಗಿದೆ. ಸೌತ್ ಆಫ್ರಿಕಾದಿಂದ ಬಂದವರ ತಪಾಸಣೆಗೂ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!