ಗಾಂಜಾ ಮಿಶ್ರಿತ ಚಾಕೊಲೆಟ್ ಮಾರಾಟ: ಇಬ್ಬರು ಆರೋಪಿಗಳ ಬಂಧನ
ರಾಯಚೂರು: ನಗರದಲ್ಲಿ ಗಾಂಜಾ ಮಿಶ್ರಿತ ಚಾಕೊಲೆಟ್ ಮಾರಾಟ ದಂಧೆ ಬೆಳಕಿಗೆ ಬಂದಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
30, 50, 100 ರೂ. ಗೆ ಗಾಂಜಾ ಚಾಕೊಲೇಟ್ (ಮಿಠಾಯಿ) ಮಾರಲಾಗುತ್ತಿತ್ತು. 6 ಗ್ರಾಂ. ತೂಕದ ಗಾಂಜಾ ಮಿಶ್ರಿತ ಚಾಕೊಲೇಟ್ ಅಂಗಡಿಗಳಲ್ಲೆ ಮಾರಲಾಗುತ್ತಿತ್ತು. ಉತ್ತರಪ್ರದೇಶದಲ್ಲಿ ತಯಾರಿಸಿದ ಚಾಕೊಲೇಟ್ ಗಳು ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಆರೋಪಿಗಳಾದ ರಾಚಯ್ಯ ಸ್ವಾಮಿ, ಅಂಬರಯ್ಯನನ್ನು ವಶಕ್ಕೆ ಪಡೆದು ಒಟ್ಟು 482 ಗಾಂಜಾ ಚಾಕೋಲೇಟ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.





