ಸುಳ್ಯ: ಮನೆಗೆ ಫೋನ್ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಯುವಕ
ಸುಳ್ಯ: ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ಇಂದು ನಡೆದಿದೆ.
ಬಾಲಕನನ್ನು ಬಿಳಿಯಾರಿನ ದಿ. ಮೂಸಾ ಎಂಬವರ ಪುತ್ರ ಹನ್ಸೀಫ್ (17) ಎಂದು ಗುರುತಿಸಲಾಗಿದೆ.
ಬಾಲಕನ ತಾಯಿ ಶಮೀರಾ ಮಗಳ ಚಿಕಿತ್ಸೆಗಾಗಿ ಕ್ಯಾಲಿಕೆಟ್ ಗೆ ತೆರಳಿದ್ದರು. ಈ ಸಂದರ್ಭ ಬಾಲಕ ಮನೆಯಲ್ಲಿ ಒಬ್ಬನೇ ಇದ್ದು ರಾತ್ರಿ ವೇಳೆ ತನ್ನ ಅಜ್ಜಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಇಂದು ಬೆಳಿಗ್ಗೆ ಬಾಲಕನ ಮನೆಗೆ ಆತನ ಮಾವ ಬಂದಾಗ ಹನ್ಸಿಪ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.





