ಮಂಗಳೂರು: ಭದ್ರತಾ ಸಿಬ್ಬಂದಿಗಾಗಿ ನಿರ್ಮಿಸಿದ ಕೊಠಡಿಯ ಕುಸಿತ: ಇಬ್ಬರಿಗೆ ಗಾಯ
ಮಂಗಳೂರು: ಭದ್ರತಾ ಸಿಬಂದಿಗಾಗಿ ನಿರ್ಮಿಸಿದ ಕೊಠಡಿಯು ಮಳೆ ನೀರಿನ ರಭಸಕ್ಕೆ ಕುಸಿದು ಇಬ್ಬರು ಗಾಯಗೊಂಡ ಘಟನೆ ಜು.23ರಂದು ಮಂಗಳೂರು ನಗರದ ಮೋರ್ಗನ್ಸ್‌ಗೇಟ್ ಬಳಿ ನಡೆದಿದೆ.
ವಿಷ್ಣು ಮತ್ತು ಚಂದ್ರಶೇಖರ ಪೂಜಾರಿ ಗಾಯಗೊಂಡ ಭದ್ರತಾ ಸಿಬಂದಿ. ಮೋರ್ಗನ್ಸ್‌ಗೇಟ್ ಮೊಯ್ಲಿ ಕೆರೆ ಸಮೀಪ ಇರುವ ಕೆನ್ ವುಡ್ ಪ್ಲೈ ಬೋರ್ಡ್ ಫ್ಯಾಕ್ಟರಿಯ ಭದ್ರತಾ ಸಿಬಂದಿಗೆ ಮಳೆ ನೀರು ಹಾದು ಹೋಗುವ ಚರಂಡಿ ಮೇಲೆಯೇ ಕೊಠಡಿ ನಿರ್ಮಿಸಲಾಗಿತ್ತು.




