ಹಾಸನ: ಯಶಸ್ವಿ ಮೆದುಳು ಗೆಡ್ಡೆ ಬ್ರೈನ್ ಟ್ಯೂಮರ್ ಗೆ ಎಚ್ಚರ ಮೆದುಳು ಶಸ್ತ್ರಚಿಕಿತ್ಸೆ ಮತ್ತು ಅಂತರ್ ದರ್ಶಕ ಶಸ್ತ್ರ ಚಿಕಿತ್ಸೆ
ಹಾಸನ: ವ್ಯಕ್ತಿಯೊಬ್ಬರಿಗೆ ಮೆದುಳು ಗೆಡ್ಡೆ ಬ್ರೈನ್ ಟ್ಯೂಮರ್ ಗೆ ಎಚ್ಚರ ಮೆದುಳು ಶಸ್ತ್ರಚಿಕಿತ್ಸೆ ಮತ್ತು ಅಂತರ್ ದರ್ಶಕ ಶಸ್ತ್ರ ಚಿಕಿತ್ಸೆಯನ್ನು ಹಾಸನ ಜನಪ್ರಿಯ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಾಡಲಾಗಿದ್ದು, ಇದು ಹಾಸನ ಮತ್ತು ಸುತ್ತಮುತ್ತಲ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ನಡೆಸಲಾದ ಯಶಸ್ವಿ ಚಿಕಿತ್ಸೆ ಎಂಬ ಹೆಗ್ಗಳಿಕೆ ಹಾಸನ ಜನಪ್ರಿಯ ಆಸ್ಪತ್ರೆ ಪಾತ್ರವಾಗಿದೆ.
ಇತ್ತೀಚೆಗೆ ಜನಪ್ರಿಯ ಆಸ್ಪತ್ರೆಗೆ ಕೋಮ ವ್ಯವಸ್ಥೆಯಲ್ಲಿ ಬಂದ ರಾಮು ಎಂಬುವವನಿಗೆ ಎಂ ಆರ್ ಐ ಸ್ಕ್ಯಾನ್ ಮಾಡಿದಾಗ ಮೆದುಳಿನಲ್ಲಿ ಗಡ್ಡೆ ಇದ್ದುದ್ದು ಕಂಡು ಬಂದಿದೆ. ಅದು ಮಾತಿನ ನಿರ್ಣಯದ ಪ್ರದೇಶದಲ್ಲಿದ್ದು ಸಂಪೂರ್ಣ ಅರವಳಿಕೆ ಕೊಟ್ಟು ಶಸ್ತ್ರಚಿಕಿತ್ಸೆಯನ್ನು ಮಾಡುವುದು ಬಾರಿ ಅಪಾಯಕಾರಿಯಾಗಿತ್ತು. ಇದರಿಂದ ಎಚ್ಚರ ಮೆದುಳು ಶಸ್ತ್ರಚಿಕಿತ್ಸೆಯನ್ನು ಇದೇ ಪ್ರಥಮ ಬಾರಿಗೆ ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಶಸ್ತ್ರಚಿಕಿತ್ಸೆ ನಡೆಸುವಾಗ ರೋಗಿಯು ಸಂಪೂರ್ಣವಾಗಿ ಹಾಡು ಹೇಳುವ ಮೂಲಕ ಮಾತಿನ ಪರೀಕ್ಷೆಯನ್ನು ಮಾಡಲಾಯಿತು. ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯು ಗುಣಮುಖವಾಗಿದ್ದು, ಯಾವುದೇ ಮಾತಿನ ಶಕ್ತಿಯ ನ್ಯೂನ್ಯತೆ ಕಂಡುಬಂದಿಲ್ಲ ಸಂಪೂರ್ಣ ಗುಣಮುಖವಾಗಿದೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಇದೇ ಪ್ರಥಮ ಬಾರಿಗೆ ಅಂತರ್ ಮೆದುಳಿನ ಮಾಸ್ಟರ್ ಗ್ರಂಥಿಯ ಗೆಡ್ಡೆಗೆ ಯಾವುದೇ ಗಾಯವನ್ನು ಮಾಡದೆ ಮೂಗಿನ ಮೂಲಕ ಅಂತರ್ ದರ್ಶಕ ರೀತಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಮೂಲಕ ರೋಗಿಯು ಸಂಪೂರ್ಣ ಗುಣಮುಖವಾಗಿದೆ ಮತ್ತು ದೈನಂದಿನ ಚಟುವಟಿಕೆಯಲ್ಲಿ ಎಂದಿನಂತೆ ತೊಡಗಿಕೊಂಡಿದ್ದಾರೆ.
ಈ ಎರಡು ಶಸ್ತ್ರಚಿಕಿತ್ಸೆಯ ಮುಂದಾಳತ್ವವನ್ನು ಚೈತನ್ಯ ಡಾಕ್ಟರ್ ಲಿಂಗರಾಜು ಮತ್ತು ಡಾಕ್ಟರ್ ಚುಚೆಂದ್ರ ರವರು ಹೊಯಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ಎಂದು ಆಸ್ಪತ್ರೆಯ ಚೇರ್ಮೇನ್ ಅಬ್ದುಲ್ ಬಶೀರ್ ವಿ.ಕೆ ಹೇಳಿದ್ದಾರೆ.
ಎದೆ ಭಾಗಕ್ಕೆ ಹೃದಯ ಹೇಗೋ ಹೊಟ್ಟೆ ಭಾಗದಲ್ಲಿ ಮೇದೋಜೀರಕ ಗ್ರಂಥಿ ( pancreas ) ಬಹುಮುಖ್ಯ ಅಂಗ ದೇಹದ ಇನ್ನಿತರ ಅಂಗಾಗಗಳನ್ನು ನಿಯಂತ್ರಣದಲ್ಲಿ ಇಡುವಲ್ಲಿ ಇದು ಸಹಕಾರಿ ಇದರ ಸೋಂಕು ಎಂದರೆ ತನ್ನ ಭಾಗಗಳನ್ನು ತಾನೇ ವಶಪಡಿಸಿಕೊಂಡು ಮನುಷ್ಯನನ್ನು ಕುಗ್ಗುವಂತೆ ಮಾಡುತ್ತದೆ ಎಂದು ಇಲ್ಲಿಯ ವೈದ್ಯರು ಹೇಳುತ್ತಾರೆ.
ಈ ಕಾಯಿಲೆಯು ಸೈಯದ್ ಫಾಸಿಲ್ ಎಂಬ 21 ವರ್ಷದ ಯುವಕನಿಗೆ ಇದರ ಸೋಂಕಿನ ಜೊತೆಗೆ ಕಲ್ಲುಗಳು ಕೂಡ ಆಗಿತ್ತು ಬೆಂಗಳೂರು ಮತ್ತು ಮಣಿಪಾಲ್ ಅಂತಹ ದೊಡ್ಡ ನಗರದಲ್ಲಿ ಚಿಕಿತ್ಸೆ ಪಡೆದುಕೊಂಡರು ಉಪಯೋಗವಾಗದೆ ಹಾಸನದ ಜನಪ್ರಿಯ ಆಸ್ಪತ್ರೆಗೆ ಬಂದರು ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಇದರ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು ಇದರ ಮುಂದಾಳತ್ವವನ್ನು ಡಾಕ್ಟರ್ ಪ್ರವೀಣ್ ಜಿಪಿ ಲಿಂಗರಾಜು ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು ರೋಗಿಯು ಗುಣಮುಖನಾಗಿ ನೌಕರಿಯಲ್ಲಿ ತೊಡಗಿಕೊಂಡಿದ್ದಾರೆ.
ಜನಪ್ರಿಯ ಆಸ್ಪತ್ರೆಯಲ್ಲಿ ಮಧುಮೇಹ ರಕ್ತದೊತ್ತಡ ತಂಙ್ಞ ಡಾ. ನಯನ ಮತ್ತು ಕೀಲು ಬದಲಾವಣೆ ಸೂಕ್ಷ್ಮ ರಂಧ್ರ ಶಸ್ತ್ರ ಚಿಕಿತ್ಸಾ ವೈದ್ಯಾಧಿಕಾರಿ ರಜತ್ ಅವರು 24 ಗಂಟೆಯೂ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ಸಿ.ಇ.ಓ, ಚೇರ್ಮನ್ ಡಾ. ಅಬ್ದುಲ್ ಬಶೀರ್ ವಿ.ಕೆ ತಿಳಿಸಿದ್ದಾರೆ.