September 27, 2026

ಅನೈತಿಕ ಪೊಲೀಸ್‌ಗಿರಿ: ಸಂಘಪರಿವಾರದ ಇಬ್ಬರು ಕಾರ್ಯಕರ್ತರ ಬಂಧನ

0
image_editor_output_image195914530-1688968156939.jpg

ದಾವಣಗೆರೆ: ಅನೈತಿಕ ಪೊಲೀಸ್‌ಗಿರಿ ಮಾಡಿದ್ದ ಇಬ್ಬರು ಯುವಕರನ್ನು ದಾವಣಗೆರೆಯ ಕೆಟಿಜೆ‌ನಗರ ಠಾಣೆಯ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ದಾವಣಗೆರೆಯ ಎಸ್‌ಪಿ ಡಾ. ಅರುಣ್ ತಿಳಿಸಿದ್ದಾರೆ.

ದೊಡ್ಡೇಶ್ ಎಂಬಾತ ನಟರೊಬ್ಬರ ಅಭಿಮಾನಿ ಸಂಘದ ಮಾಜಿ ಅಧ್ಯಕ್ಷನಾಗಿದ್ದು, ಈಗ ಸಂಘಪರಿವಾರದ ಜೊತೆ ಗುರುತಿಸಿಕೊಂಡಿದ್ದ.

 

ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಹಾಗೂ ಯುವತಿಯನ್ನು ಅಶ್ಲೀಲವಾಗಿ ನಿಂದನೆ ಮಾಡಿ ಪೇಸ್‌ಬುಕ್‌ನಲ್ಲಿ ಲೈವ್ ವೀಡಿಯೋ ಮಾಡಿದ್ದಕ್ಕೆ ಈತನ ವಿರುದ್ಧ ನೈತಿಕ ಪೊಲೀಸ್‌ಗಿರಿ ಹಾಗೂ ಜಾತಿ‌ ನಿಂದನೆಯ ಕೇಸ್ ದಾಖಲಾಗಿದೆ.

ದೊಡ್ಡೇಶ್ ಹಾಗೂ ಲಿಂಗರಾಜ್ ಇಬ್ಬರನ್ನೂ ಕೆಟಿಜೆನಗರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶುಕ್ರವಾರ ಕೆಟಿಜೆನಗರ ಠಾಣೆಯ ವ್ಯಾಪಿಗೆ ಬರುವ ಚಿತ್ರಮಂದಿರಕ್ಕೆ ಅನ್ಯಕೋಮಿನ ಯುವಕರ ಜೊತೆ ಯುವತಿಯೊಬ್ಬಳು ಸಿನಿಮಾಗೆ ಬಂದಿದ್ದಳು. ಇದರ ಬಗ್ಗೆ‌ ಮಾಹಿತಿ ತಿಳಿದ ದೊಡ್ಡೇಶ್, ಲಿಂಗರಾಜ್ ಹಾಗೂ ಆತನ ಸ್ನೇಹಿತರು, ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!