May 11, 2026

ಸುಳ್ಯ: ಹೊಳೆಗೆ ಬಿದ್ದು ನೀರು ಪಾಲಾಗಿದ್ದ ಕೂಲಿ ಕಾರ್ಮಿಕನ ಮೃತದೇಹ ಪತ್ತೆ

0
image_editor_output_image1164828915-1688899228497.jpg

ಅರಂತೋಡು: ಅಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಪಾಲ ದಾಟುತ್ತಿರುವ ವೇಳೆಯಲ್ಲಿ ಜು.6 ರ ಸಂಜೆಗೆ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಕಾರ್ಮಿಕ‌ ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕನ ಮೃತದೇಹ ಜು.9ರ ಭಾನುವಾರ ಪತ್ತೆಯಾಗಿದೆ.

ಕುಂದಲ್ಪಾಡಿ ಪೆರಾಜೆ ಎಂಬಲ್ಲಿ ರಬ್ಬರ್ ಟ್ಯಾಪರ್ ಆಗಿದ್ದ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಸಮೀಪದ ನಾರಾಯಣನ್ ಎಂಬವರು ಕೂರ್ನಡ್ಕದಲ್ಲಿ ಪಾಲ ದಾಟಿ ಬರುತ್ತಿದ್ದಾಗ ನೀರು ಪಾಲಾಗಿದ್ದರು.

ಅಂದಿನಿಂದಲೇ ಶೋಧ ಕಾರ್ಯ ಆರಂಭಗೊಂಡಿತ್ತು. ಸುಳ್ಯ ಅಗ್ನಿಶಾಮಕ ದಳ, ಎಸ್.ಡಿ.ಆರ್.ಎಫ್ ತಂಡ, ಪೋಲಿಸ್ ಇಲಾಖೆಯೊಂದಿಗೆ ಅರಂತೋಡು ಕಲ್ಲುಗುಂಡಿ ವಿಖಾಯ ತಂಡ ಹಾಗೂ ಪೈಚಾರಿನ ಮುಳುಗು ತಜ್ಞರು ಕೂಡಾ ಶೋಧ ಕಾರ್ಯದಲ್ಲಿ ತೊಡಗಿದ್ದರು.

ಇದೀಗ ಆಲೆಟ್ಟಿಯ ಕನ್ನಿಗುಂಡಿ ಬಳಿಯಲ್ಲಿ ಪಯಸ್ವಿನಿ ಹೊಳೆ ಮಧ್ಯೆ ಪೊದೆಯಲ್ಲಿ ಸಿಲುಕಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!