February 3, 2026

ಉಳ್ಳಾಲ: ಬಾರ್ ಗೆ ನುಗ್ಗಿ 2 ಲಕ್ಷ ರೂ. ಸಹಿತ ಮದ್ಯದ ಬಾಟಲಿಗಳ ಕಳವು

0
image_editor_output_image-363803915-1688624164391.jpg

ಉಳ್ಳಾಲ: ನಿರಂತರ ಸುರಿಯುವ ಬಿರು ಮಳೆಯ ಮಧ್ಯೆಯೂ ಉಳ್ಳಾಲ ತಲಪಾಡಿಯ ಮರೋಳಿ ಬಾರ್ ಗೆ ನುಗ್ಗಿರುವ ಕಳ್ಳ ರೂ.2 ಲಕ್ಷ ನಗದು ಹಾಗೂ ಬಾಟಲಿಗಳನ್ನು ಕಳವುಗೈದಿರುವ ಘಟನೆ ಮಂಗಳವಾರ ತಡರಾತ್ರಿ ವೇಳೆ ನಡೆದಿದೆ.

ಕಿರಾತಕ ಕಳ್ಳನ ಬಾರಿನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.‌ ಮರೋಳಿ ಬಾರ್ ನ ಶೌಚಾಲಯದ ಕಿಟಕಿ ಮೂಲಕ ಒಳನುಗ್ಗಿರುವ ಕಳ್ಳ, ಬಾಗಿಲನ್ನು ಮುರಿದು ಒಳನುಗ್ಗಿ ಕ್ಯಾಷಿನಲ್ಲಿರಿಸಲಾಗಿದ್ದ ರೂ.2 ಲಕ್ಷ ನಗದು ಕಳವುಗೈದಿದ್ದಾನೆ.

ಜೊತೆಗೆ ಕೆಲವು ಬಾಟಲಿಗಳನ್ನು ಎಗರಿಸಿ ಜಾಗ ಖಾಲಿ ಮಾಡಿದ್ದಾನೆ. ಬಾರ್ ಒಳಗಡೆ ವಿಚಾರ ತಿಳಿದಿರುವ ವ್ಯಕ್ತಿಯೇ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಬಾರ್ ಮಾಲೀಕರಿಗೆ ಬಸ್ಸಿದ್ದು, ಅದಕ್ಕಿರುವ ವಾಚ್ ಮೆನ್ ಕೂಡ ಇರದ ಸಮಯವನ್ನು ಉಪಯೋಗಿಸಿ ಕೃತ್ಯವೆಸಗಿದ್ದಾರೆ.

ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ.

Leave a Reply

Your email address will not be published. Required fields are marked *

error: Content is protected !!