February 4, 2026

ಕಾರವಾರ: ಆನ್ ಲೈನ್ ಗೇಮ್ ಚಟದಿಂದಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ

0
image_editor_output_image735628653-1688359403147.jpg

ಕಾರವಾರ: ಆನ್ ಲೈನ್ ಗೇಮ್ ಚಟದಿಂದಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡದಲ್ಲಿ ನಡೆದಿದೆ.

ವಿಜೇತ್ ಶಾಂತಾರಾಮ ಹೆಗಡೆ (37) ಎಂಬಾತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಘಟನೆ ಶಿರಸಿ ತಾಲೂಕಿನ ಕುಳವೆ ಬಳಿ ನಡೆದಿದೆ.

ಶುಕ್ರವಾರ ಮನೆಯಿಂದ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದ ಯುವಕ ಮತ್ತೆ ಮನೆಗೆ ವಾಪಸ್ಸಾಗಿಲ್ಲ. ಆ ಬಳಿಕ ಡೆತ್‍ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!