December 19, 2025

ಪುತ್ತೂರು: ನಾಲ್ವರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆ ತಂದ ಪೊಲೀಸರು:
ಠಾಣೆ ಮುಂದೆ ಜಮಾಯಿಸಿದ ಹಿಂ.ಜಾ.ವೇ ಕಾರ್ಯಕರ್ತರು

0
IMG-20211126-WA0019.jpg

ಪುತ್ತೂರು: ವಿದ್ಯಾರ್ಥಿಗಳ ನಡುವಿನ ಹಲ್ಲೆ ಪ್ರಕರಣ ಅಥವಾ ಇನ್ನಾವ ವಿಚಾರದಲ್ಲೂ ಯಾವುದೇ ಸಂಘಟನೆ ಇನ್ ಟರ್ ಫಿಯರ್ ಆಗಬಾರದು. ಅಪ್ರಾಪ್ತ ವಿದ್ಯಾರ್ಥಿಗಳನ್ನು ಅದರದ್ದೇ ಆದ ರೀತಿಯಲ್ಲಿ ತನಿಖೆ ಮಾಡಲಾಗುವುದು ಎಂದು ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರು ನೀಡಿದ ಭರವಸೆಯಂತೆ ಧರಣಿ ಹಿಂಪಡೆಯಲಿದ್ದೇವೆ ಎಂದು ಡಿವೈಎಸ್ಪಿ ಜೊತೆ ಮಾತುಕತೆ ನಡೆಸಿದ ಬಿಜೆಪಿ ನಗರ‌ ಮಂಡಲದ ಅಧ್ಯಕ್ಷ ಮತ್ತು ಹಿಂಜಾವೇ ಪ್ರಮುಖರು ತಿಳಿಸಿದಂತೆ ಮಹಿಳಾ ಠಾಣೆಯ ಮುಂದೆ ಜಮಾಯಿಸಿದವರು ಕಾರ್ಯಕರ್ತರು ಧರಣಿ ಹಿಂಪಡೆದಿದ್ದಾರೆ.

ಬಿಜೆಪಿ ನಗರಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಹಿಂದು ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ರತ್ನಾಕರ ಶೆಟ್ಟಿ, ಅಜಿತ್ ಕುಮಾರ್, ದಿನೇಶ್ ಪಂಜಿಗ, ಕೃಷ್ಣಪ್ರಸಾದ್ ಶೆಟ್ಟಿ, ಚಿನ್ಮಯ ರೈ ಈಶ್ವರಮಂಗಲ ಅವರು ಡಿವೈಎಸ್ಪಿ ಜೊತೆ ಮಾತುಕತೆ ನಡೆಸಿದರು.

Leave a Reply

Your email address will not be published. Required fields are marked *

You may have missed

error: Content is protected !!