March 24, 2026

ಮಡಿಕೇರಿ | 10 ಚಕ್ರದ ಲಾರಿ ಢಿಕ್ಕಿ: ಬೈಕ್ ಸವಾರನ ದೇಹ ಎರಡು ತುಂಡು

0
image_editor_output_image-1519270011-1687497734931.jpg

ಮಡಿಕೇರಿ: ಬೈಕ್ ಹಾಗೂ 10 ಚಕ್ರದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸವಾರನ ದೇಹ ಎರಡು ತುಂಡಾಗಿ ಮೃತಪಟ್ಟ ಘಟನೆ ಕುಶಾಲನಗರದ ಕೂಡ್ಲೂರು ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಗಂಗಾಧರ ಎಂದು ಗುರುತಿಸಲಾಗಿದೆ. ಈತ ಮೂಲತ ಹಾಸನ ಜಿಲ್ಲೆಯ ಅರಸಿಕೆರೆಯವನಾಗಿದ್ದ.

ಕುಶಾಲನಗರದಲ್ಲಿ ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿ ಕೆಲಸ ಮುಗಿಸಿ ವಾಪಸ್ ರೂಮಿಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ.
ಅಪಘಾತ ನಡೆದ ಮೇಲೆ ಬೈಕ್ ಸವಾರನ ಮೇಲೆ ಲಾರಿ ಹರಿದಿದೆ. ಇದರ ಪರಿಣಾಮ ಬೈಕ್ ಸವಾರನ ದೇಹ ಎರಡು ತುಂಡಾಗಿದೆ. ಘಟನೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!