March 24, 2026

ತಗಡಿನ ಶೆಡ್‍ನಲ್ಲಿ ವಾಸಿಸುವ ವೃದ್ಧೆಯ ಮನೆಗೆ 1 ಲಕ್ಷ ರೂ. ವಿದ್ಯುತ್ ಬಿಲ್

0
image_editor_output_image410384402-1687417301502.jpg

ಕೊಪ್ಪಳ: 2 ಬಲ್ಬ್ ಇರುವ ತಗಡಿನ ಶೆಡ್‍ನಲ್ಲಿ ವಾಸಿಸುವ ವೃದ್ಧೆಯೊಬ್ಬರ ಮನೆಗೆ ಜೆಸ್ಕಾಂ ಸಿಬ್ಬಂದಿ 1 ಲಕ್ಷದ 3 ಸಾವಿರದ 315 ರೂ. ಬಿಲ್ ನೀಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಇದರಿಂದ ಆತಂಕಕ್ಕೊಳಗಾದ ವ್ರದ್ಧೆ ಹಾಗೂ ಆಕೆಯ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ ಕಟ್ಟಲು ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ.

ವೃದ್ಧೆ ಗಿರಿಜಮ್ಮ ಎಂಬುವರ ಮನೆಗೆ ಈ ಬಿಲ್ ಬಂದಿದ್ದು, ಕಳೆದ ಆರು ತಿಂಗಳಿಂದ ಜೆಸ್ಕಾಂ ಸಿಬ್ಬಂದಿ ಇಷ್ಟೆಲ್ಲ ಬಿಲ್ ನೀಡುತ್ತಿದ್ದಾರೆ. ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದು, ಮೊದಲು ಪ್ರತಿ ತಿಂಗಳು 70 ರೂ. ನಿಂದ 80 ರೂ. ಬಿಲ್ ಬರುತ್ತಿತ್ತು.

ಅದರಲ್ಲೂ ನಾವಿರುವುದು ಇಬ್ಬರೇ ನಾವೆಷ್ಟು ಕರೆಂಟ್ ಬಳಸುತ್ತೇವೆ? ಈಗ ಇದ್ದಕ್ಕಿದ್ದಂತೆ ಇಷ್ಟೆಲ್ಲ ಜಾಸ್ತಿಯಾಗಿದೆ ಎಂದು ವೃದ್ಧೆ ಕಣ್ಣೀರಿಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!