ಶಿವಮೊಗ್ಗ | ಕಾಲೇಜು ಕಾರ್ಯಕ್ರಮ ಮುಗಿಸಿ ಮನೆಕಡೆ ಹೊರಟಿದ್ದಾಗ ಬೈಕ್ ಅಪಘಾತ: ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು
ಶಿವಮೊಗ್ಗ: ಕಾಲೇಜು ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಳಿಸಿ ಮನೆಕಡೆ ಹೊರಟಿದ್ದ ವಿದ್ಯಾರ್ಥಿಯೊಬ್ಬ ಬೈಕ್ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ 60 ಅಡಿ ರಸ್ತೆಯಲ್ಲಿ ಸಂಭವಿಸಿದೆ.
ಗೌತಮ್ (21) ಮೃತ ವಿದ್ಯಾರ್ಥಿ. ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಈ ಘಟನೆ ಸಂಭವಿಸಿದೆ. ಕಾಲೇಜಿನ ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಳಿಸಿ ಕಾಶಿಪುರದಲ್ಲಿರುವ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬೈಕ್ ಅಪಘಾತಕ್ಕೀಡಾಗಿ ಗೌತಮ್‌ಗೆ ತೀವ್ರ ರಕ್ತಸ್ರಾವ ಉಂಟಾಗಿದ್ದು, ಅತ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ತಿಳಿದು ಬಂದಿದೆ.




