July 3, 2026

ಪುತ್ತೂರು: ಹೃದಯಾಘಾತದಿಂದ ಯುವಕ ನಿಧನ

0
image_editor_output_image1782739186-1687166279459.jpg

ಪುತ್ತೂರು: ಯುವಕನೋರ್ವರು ಹೃದಯಾಘಾತದಿಂದ ನಿಧನರಾದ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ.

ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆಯ ಹಿಂಬದಿಯ ಪ್ಲಾಟ್ ನ ನಿವಾಸಿ ಇಂಮ್ತಿಯಾಝ್ (34) ನಿಧನರಾದವರು.

ಇಂಮ್ತಿಯಾಝ್ ಅವರು ಪುತ್ತೂರಿನ ಸ್ಟಾರ್ ಒಪ್ಟಿಕಲ್ಸ್ ಶಾಫ್ ನಲ್ಲಿ ಉದ್ಯೋಗದಲ್ಲಿದ್ದರು.

ಸಂಜೆ ವೇಳೆ ಮನೆಗೆ ಬಂದ ಇಂಮ್ತಿಯಾಝ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇಂಮ್ತಿಯಾಝ್ ಅವರ ನಿಧನದಿಂದ ಕುಟುಂಬಸ್ಥರು ದುಃಖಿತರಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!