February 3, 2026

ಪತಿಯ ಕಿರುಕುಳ ನೇಣುಬಿಗಿದು ಪತ್ನಿ ಆತ್ಮಹತ್ಯೆ

0
image_editor_output_image-337391853-1686807152485.jpg

ಮಂಡ್ಯ: ಗಂಡನ ಕಿರುಕುಳದಿಂದ ಮಹಿಳೆ ಯೋರ್ವಳು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಗ್ರಾಮದ ನಿವಾಸಿ ಎಚ್.ಎಂ.ಮದುಸೂಧನ್ ಎಂಬವರ ಪತ್ನಿ ಕೆ.ಆಶಾ(34) ಮೃತರು ಎಂದು ಗುರುತಿಸಲಾಗಿದೆ. ಆಶಾ ಅವರು ಹೊಸಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.

ಕಳೆದ ಒಂಬತ್ತು ವರ್ಷಗಳ ಹಿಂದೆ ಮಧುಸೂಧನ್ ನನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗಳು ಆಗಾಗ ಜಗಳ ಮಾಡುತ್ತಿದ್ದರು ಎನ್ನಲಾಗಿದೆ.

ಈ ವಿಚಾರವಾಗಿ ಹಲವುಬಾರಿ ಹಿರಿಯರು ಸಂಧಾನ ನಡೆಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ.

ಇತ್ತೀಚೆಗೆ ಮಧುಸೂಧನ್ ಪತ್ನಿ ಆಶಾರನ್ನು ತವರುಮನೆಯಿಂದ ಹಣ ಪಡೆದು ಬರುವಂತೆ ಕಿರುಕುಳ ನೀಡುತ್ತಿದ್ದನ್ನು.

ಗಂಡನ ಕಿರುಕುಳ ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸಹೋದರ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!