February 2, 2026

ಉಳ್ಳಾಲ: ಮಳೆಯಿಂದಾಗಿ ತೀವ್ರಗೊಂಡ ಕಡಲ್ಕೊರೆತ: ಸಮುದ್ರಗಾಹುತಿಯಾದ ಮನೆ, ಮರ, ಮಟ್ಟುಗಳು

0
IMG-20230612-WA0018.jpg

ಉಳ್ಳಾಲ: ಮಳೆಯಿಂದಾಗಿ ಸಮುದ್ರವು ಬಿರುಸುಗೊಂಡಿದ್ದು ಉಳ್ಳಾಲದ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ಜೋರಾಗಿದ್ದು ದಡಕ್ಕೆ ಅಪ್ಪಳಿಸುತ್ತಿದೆ.

ಉಳ್ಳಾಲದ ತೀರದ ಪ್ರದೇಶಗಳಾದ ಕೈಕೋ, ಸೀಗ್ರೌಂಡ್, ಮೊಗವೀರಪಟ್ಣ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿದೆ.

ಇನ್ನು ಉಚ್ಚಿಲ ಬಟ್ಟಪ್ಪಾಡಿಯಲ್ಲಿ ತಾತ್ಕಾಲಿಕ ಕಾಮಗಾರಿ ನಡೆಯುತ್ತಿದ್ದರೂ ಸಮುದ್ರದ ಸಮುದ್ರದ ಅಲೆಗಳು ತೀರದ ಮನೆಗಳಿಗೆ ಅಪ್ಪಳಿಸುತ್ತಿದ್ದು ತೀರದ ಪ್ರದೇಶದ ಮರ ಗಿಡಗಳು, ಅನೇಕ ಮನೆಗಳು, ರಸ್ತೆ ಸಮುದ್ರ ಪಾಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಸ್ಥಳಿಯ ಶಾಸಕ, ವಿಧಾನ ಸಭಾ ಸಭಾಪತಿ ಯು ಟಿ ಖಾದರ್ ಈ ಪ್ರದೇಶಗಳಿಗೆ ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ತಡೆಗೆ ಮುಂದಿನ ವರ್ಷದಿಂದಲೇ ಶಾಶ್ವತ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!