70 ಲಕ್ಷ ಕ್ರಿಪ್ಟೋಕರೆನ್ಸಿ ಕಳೆದುಕೊಂಡು ತೆಲಂಗಾಣ ವ್ಯಕ್ತಿ ಆತ್ಮಹತ್ಯೆಗೆ ಶರಣು
ತೆಲಂಗಾಣ: ಸೂರ್ಯಪೇಟ್ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳೆದುಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖಮ್ಮಂ ಮೂಲದ ಜಿ.ರಾಮಲಿಂಗಸ್ವಾಮಿ (36) ಸೂರ್ಯಪೇಟೆ ಪಟ್ಟಣದ ಲಾಡ್ಜ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಠಡಿಯಲ್ಲಿ ತಂಗಿದ್ದ ವ್ಯಕ್ತಿ ಬಾಗಿಲು ತಟ್ಟಿದರೂ ಸ್ಪಂದಿಸುತ್ತಿಲ್ಲ ಎಂದು ಲಾಡ್ಜ್ ಮಾಲೀಕರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ತಡರಾತ್ರಿ ಆತನ ಶವವನ್ನು ಕೊಠಡಿಯಿಂದ ಹೊರತೆಗೆದಿದ್ದಾರೆ.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಂಗಳವಾರದಂದು ಈ ವ್ಯಕ್ತಿ ತೀವ್ರ ಕ್ರಮಕ್ಕೆ ಮುಂದಾಗಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಟುಂಬದ ಸದಸ್ಯರ ಪ್ರಕಾರ, ವ್ಯಕ್ತಿ ಇಬ್ಬರು ಸ್ನೇಹಿತರೊಂದಿಗೆ ಕ್ರಿಪ್ಟೋಕರೆನ್ಸಿ ಅಪ್ಲಿಕೇಶನ್‌ನಲ್ಲಿ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುತ್ತಿದ್ದರು. ಅವರು ಆರಂಭದಲ್ಲಿ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರು ಮತ್ತು ಕೆಲವು ಉತ್ತಮ ಆದಾಯವನ್ನು ಪಡೆದ ನಂತರ ಹೂಡಿಕೆಗಳನ್ನು ಹೆಚ್ಚಿಸಿದರು ಆದರೆ ದೊಡ್ಡ ನಷ್ಟವನ್ನು ಅನುಭವಿಸಿದರು. ಸಾಲದ ಮೂಲಕ ಸಂಗ್ರಹಿಸಿದ 70 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ.
ಹಣ ಕಳೆದುಕೊಂಡಿದ್ದಕ್ಕೆ ಆಘಾತಗೊಂಡ ರಾಮಲಿಂಗಸ್ವಾಮಿ, ಲೇವಾದೇವಿದಾರರ ಕಿರುಕುಳ ತಾಳಲಾರದೆ ನ.22ರಂದು ಸೂರ್ಯಪೇಟೆ ಪಟ್ಟಣಕ್ಕೆ ತೆರಳಿ ಲಾಡ್ಜ್‌ನಲ್ಲಿ ತಂಗಿದ್ದರು.





