December 19, 2025

ಉಪ್ಪಳ: ಉಸ್ತಾದ್ ಅವರನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ:
ಒಬ್ಬ ಆರೋಪಿಯ ಬಂಧನ

0
IMG-20211125-WA0015.jpg

ಕಾಸರಗೋಡು: ಉಪ್ಪಳ ನಯಾಬಜಾರಿನ ಅಬ್ದುಲ್ಲಾ ಉಸ್ತಾದ್ ಎಂಬವರನ್ನು ಅಪಹರಿಸಿ ಹಣಕ್ಕಾಗಿ ಬೆದರಿಸಿ, ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿಯೋರ್ವನನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತನನ್ನು ಪಚ್ಚ೦ಬಳ ಟಿಪ್ಪುನಗರದ ಮುಸಾಹಿದ್ ಹುಸೈನ್ (24) ಎಂದು ಗುರುತಿಸಲಾಗಿದೆ.

ಎರಡು ದಿನಗಳ ಹಿಂದೆ ಕಾರಿನಲ್ಲಿ ಬಂದ ತಂಡವು ಉಪ್ಪಳದ ಕ್ವಾಟರ್ಸ್‌‌ಗೆ ನುಗ್ಗಿ ಅಬ್ದುಲ್ಲರನ್ನು ಬಲವಂತವಾಗಿ ಹೊರಗೆಳೆದು ಬಳಿಕ ಕಾರಿನಲ್ಲಿ ಅಪಹರಿಸಿದ್ದು, ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟು ಹಲ್ಲೆ ನಡೆಸಿದ್ದು, ಬಳಿಕ ಉಪ್ಪಳ ಕುನ್ನಿಲ್ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ಬೆದರಿಸಿ ತಂಡವು ಹಲ್ಲೆ ನಡೆಸಿತ್ತು.
ಈ ನಡುವೆ ನಡುವೆ ಪತ್ನಿ ನೀಡಿದ ಮಾಹಿತಿಯಂತೆ ಕುಂಬಳೆ ಮತ್ತು ಮಂಜೇಶ್ವರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪೈವಳಿಕೆ ಬಳಿ ತಂಡವು ಅಬ್ದುಲ್ಲ ಉಸ್ತಾದ್ ರನ್ನು ಬಿಟ್ಟು ಪರಾರಿಯಾಗಿದೆ. ಬಳಿಕ ನಡೆಸಿದ ತನಿಖೆಯಿಂದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ನಾಲ್ವರು ತಲೆಮರೆಸಿಕೊಂಡಿದ್ದಾರೆ.
 

Leave a Reply

Your email address will not be published. Required fields are marked *

You may have missed

error: Content is protected !!