ಕಾಸರಗೋಡು: ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವಿದ್ಯಾರ್ಥಿ ಮುಳುಗಿ ಸಾವು
ಕಾಸರಗೋಡು : ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿಧ ಘಟನೆ ನೆರೆಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ರಶೀದ್ (15) ಮೃತ ದುರ್ದೈವಿಯಾಗಿದ್ದಾರೆ.
ಉದುಮ ಪಾಕ್ಯಾರ ಮಜೀದ್ ಎಂಬವರ ಪುತ್ರ ರಶೀದ್ ತನ್ನ ಸ್ನೇಹಿತರೊಂದಿಗೆ ಪಾಲಕುನ್ ಕಪ್ಪಿಲ್ ಕೋಡಿಕಡಪ್ಪುರಂನ ಅಳಿವೆಯಲ್ಲಿ ಸ್ನಾನ ಮಾಡಲು ತೆರಳಿದ್ದಾನೆ.
ಈ ಸಂದರ್ಭ ನೀರಿಗೆ ಇಳಿದ ರಶೀದ್ ಮುಳುಗಿ ದಾರುಣ ಅಂತ್ಯವನ್ನು ಕಂಡಿದ್ದಾನೆ.
ಮಾಹಿತಿ ಪಡೆದ ಪೊಲೀಸರು ಮತ್ತು ಸ್ಥಳೀಯರು ಘಟನಾ ಸ್ಥಳಕ್ಕೆ ತೆರಳಿ ಅಗ್ನಿಶಾಮಕ ದಳದ ನೆರವಿನಿಂದ ಮೃಯ ದೇಹವನ್ನು ಮೇಲಕ್ಕೆತ್ತಿದ್ದಾರೆ.




