March 24, 2026

ಕಲ್ಲಡ್ಕ: ಗೋಳ್ತಮಜಲು ಜೆಮ್ ಸ್ಕೂಲ್ ಅದ್ಧೂರಿ ಪ್ರಾರಂಭೋತ್ಸವ

0
IMG-20230603-WA0039.jpg

ಕಲ್ಲಡ್ಕ; ಇಲ್ಲಿಗೆ ಸಮೀಪದ ಗೋಳ್ತಮಜಲು ಹಜಾಜ್ ಟ್ರಸ್ಟ್ ನ ಪ್ರತಿಷ್ಟಿತ ಜೆಮ್ ಆಂಗ್ಲ ಮಾಧ್ಯಮ ಶಾಲೆಯ 2023-24 ನೇ ಸಾಲಿನ ಪ್ರಾರಂಭೋತ್ಸವವು ಶುಕ್ರವಾರ ಸಕಲ ಸಿದ್ಧತೆಯೊಂದಿಗೆ ಅದ್ಧೂರಿಯಾಗಿ ನಡೆಯಿತು.

ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾದ ರಶೀದ್ ವಿಟ್ಲ ಅವರು ಎಲ್ ಕೆ ಜಿ ತರಗತಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜೆಮ್ ಸ್ಕೂಲ್ ಮುಖ್ಯ ವ್ಯವಸ್ಥಾಪಕರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸಂಚಾಲಕರಾದ ಅಹ್ಮದ್ ಮುಸ್ತಫಾ ಗೋಳ್ತಮಜಲು, ಪ್ರಾಂಶುಪಾಲರಾದ ನಿರಂಜನ್ ಉಪಸ್ಥಿತರಿದ್ದರು. ಶಾಲೆ ಹಾಗೂ ಪರಿಸರವನ್ನು ತಳಿರು ತೋರಣಗಳಿಂದ ಅಲಂಕರಿಸಿ, ಗೊಂಬೆ ಬಳಗದಿಂದ ವಿದ್ಯಾರ್ಥಿಗಳು, ಹೆತ್ತವರನ್ನು ವಿಶಿಷ್ಟವಾಗಿ ಸ್ವಾಗತಿಸಲಾಯಿತು.

Leave a Reply

Your email address will not be published. Required fields are marked *

error: Content is protected !!